Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ವಿಜೃಂಭಣೆಯಿಂದ ನಡೆದ ಮಂಡ್ಯ ದಸರಾ : ಗಮನ...

ವಿಜೃಂಭಣೆಯಿಂದ ನಡೆದ ಮಂಡ್ಯ ದಸರಾ : ಗಮನ ಸೆಳೆದ ಸ್ತಬ್ಧಚಿತ್ರ ಮೆರವಣಿಗೆ

ವಾರ್ತಾಭಾರತಿವಾರ್ತಾಭಾರತಿ30 Sept 2017 7:48 PM IST
share
ವಿಜೃಂಭಣೆಯಿಂದ ನಡೆದ ಮಂಡ್ಯ ದಸರಾ : ಗಮನ ಸೆಳೆದ ಸ್ತಬ್ಧಚಿತ್ರ ಮೆರವಣಿಗೆ

ಮಂಡ್ಯ, ಸೆ.30: ಮಂಡ್ಯ ಯೂತ್ ಗ್ರೂಪ್ ಸಂಘಟನೆಯು ಶನಿವಾರ ಆಯೋಜಿಸಿದ್ದ ನಾಲ್ಕನೆ ಮಂಡ್ಯ ದಸರಾ ವಿಜೃಂಭಣೆಯಿಂದ ನೆರವೇರಿತು.  ರಾಷ್ಟ್ರಪಕ್ಷಿ ನವಿಲು, ವೃಕ್ಷ ಮಾತೆಯ ಅರಣ್ಯರೋಧನ, ರಣರಂಗದಲ್ಲಿ ಶತ್ರುಗಳ ಸೆದೆಬಡಿಯುತ್ತಿರುವ ಸೇನೆ, ಬಂಗಾರ ಮಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಕೆಆರ್‍ಎಸ್ ಅಣೆಕಟ್ಟು,  ಮಹಿಳೆಯ  ಪ್ರಗತಿಯನ್ನು ಬಿಂಬಿಸುವ ಮಾದರಿಗಳು, ಮಾಟ-ಮಂತ್ರ ಸೇರಿದಂತೆ ಮೌಢ್ಯ ವಿರೋಧಿ ನಿಲುವು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆದವು. 

ಕಾಳಿಕಾಂಬ ದೇವಾಲಯ ಸಮೀಪವಿರುವ ಗಜೇಂದ್ರ ಮೋಕ್ಷ ಕೊಳದ ಬಳಿಯ ಬನ್ನಿಮರಕ್ಕೆ ಸಂಸದ ಸಿ.ಎಸ್.ಪುಟ್ಟರಾಜು ಪೂಜೆ ಸಲ್ಲಿಸುವ ಮೂಲಕ `ಮಂಡ್ಯ ದಸರೆ ಮೆರವಣಿಗೆಗೆ  ಚಾಲನೆ ನೀಡಿದರು. ಗ್ರೂಪ್‍ನ ಅಧ್ಯಕ್ಷ ಡಾ.ಅನಿಲ್ ಆನಂದ್, ಉಪಾಧ್ಯಕ್ಷ ಎಚ್.ಎಸ್.ಮಂಜು, ¸ ನಿವೃತ್ತ ಪ್ರಾಂಶುಪಾಲ ಎ.ಬಿ.ಶಂಕರ್ ಮತ್ತಿತರ ಗಣ್ಯರು ಹಾಜರಿದ್ದರು.

ನಂತರ, ಸಾಂಸ್ಕøತಿಕ ಕಲಾ ತಂಡಗಳ ಮೆರವಣಿಗೆ ಸಾಗಿತು. ರಾಷ್ಟ್ರಪಕ್ಷಿ ನವಿಲು ಸ್ತಬ್ಧ ಚಿತ್ರ ದಸರಾ ಮೆರವಣಿಗೆ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿತು. `ಮರ ಬೆಳೆಸಿ ಪರಿಸರ ರಕ್ಷಿಸಿ' ಎಂಬ ಸಂದೇಶವುಳ ವೃಕ್ಷಗಳ ರಕ್ಷಣೆಯ  ಜಾಗೃತಿ ಚಿತ್ರ,  ಮಹಿಳೆಯರು ಪ್ರಗತಿಯ ಚಿತ್ರಣಗಳನ್ನು ಒಳಗೊಂಡ ಸ್ತಬ್ಧಚಿತ್ರ, ಶತ್ರುಗಳನ್ನು ಸೆದೆಬಡಿಯುವ ಸರ್ಜಿಕಲ್ ಸ್ಟ್ರೈಕ್, ಸಮಗ್ರ ಕೃಷಿ ಅಭಿಯಾನ, ಮೌಢ್ಯ ವಿರೋಧಿ ಹಾಗು  ಕೃಷ್ಣರಾಜಸಾಗರ ಅಣೆಕಟ್ಟು ಸ್ತಬ್ಧಚಿತ್ರಗಳು ಒಂದರ ಹಿಂದೆ ಒಂದರಂತೆ ಮೆರವಣಿಗೆಯಲ್ಲಿ ಸಾಗಿ ಬಂದವು.

ಹೆಗ್ಗಡಹಳ್ಳಿ ಹೊನ್ನೇಗೌಡರ ಪಟಕುಣಿತ, ಕೃಷ್ಣೇಗೌಡ ತಂಡದಿಂದ ಚಿಲಿಪಿಲಿ ಗೊಂಬೆ, ಕೆ.ಬೆಟ್ಟಹಳ್ಳಿ ನಾಗಣ್ಣ ತಂಡದ ವೀರ ಮಕ್ಕಳ ಕುಣಿತ, ಕೊತ್ತತ್ತಿ ಸಿದ್ದಯ್ಯ ತಂಡದ ಕೊಂಬು-ಕಹಳೆ, ಕಲ್ಲಾರೆಪುರ ಮಹೇಶ್ ತಂಡದ ಕಂಸಾಳೆ, ಲಕ್ಷ್ಮೀಸಾಗರ ಕೆಂಪಣ್ಣ ತಂಡದಿಂದ ನಾಸಿಕ್ ಡೊಳ್ಳು, ಮಂಡ್ಯದ ರಾಜೇಶ್ ತಂಡ ಲಗಾನ್ ಟೀಮ್, ಹೊಸಹಳ್ಳಿಯ ವಸಂತಕುಮಾರ್ ತಂಡದಿಂದ ನಂದಿಧ್ವಜ, ಕಾರಸವಾಡಿ ದೇವರಾಜು ತಂಡದಿಂದ ಪೂಜಾ ಕುಣಿತ ಮೆರವಣಿಗೆಗೆ ಮೆರಗು ನೀಡಿದವರು.
ಅನಿಲ್‍ಕುಮಾರ್ ತಂಡದ ಸೋಮನ ಕುಣಿತ, ಮೇಲುಕೋಟೆಯ ರಾಮು ತಂಡದ ಡೊಳ್ಳು ಕುಣಿತ,  ಹರಿಧರ್ ತಂಡದಿಂದ ನಾದಸ್ವರ, ದೊಣ್ಣೆವರಸೆ, ಉಮ್ಮಡಹಳ್ಳಿ ಬೋರಯ್ಯ ತಂಡದ ಜೋಡಿ ನಗಾರಿ, ಅನಂತು ಅವರ ರೋಲರ್ ಡ್ರಮ್ ಸೆಲ್, ಮಂಜು ಜಡೆ ಕೋಲಾಟ, ಕೋಲಾಟ, ಸೇರಿದಂತೆ ಇನ್ನಿತರ ಸಾಂಸ್ಕøತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಗಮನಸೆಳೆದವು. 

ಸಿದ್ಧಿ ಜನಾಂಗದವರ ವೇಷಭೂಷಣ, ಅವರ ಕುಣಿತ ಹಾಗು ಪುಟ್ಟ ಗಾತ್ರದ ಬಂಡೂರು ಕುರಿ ತಳಿಗಳು, ಮರದ ಎಲೆಗಳನ್ನು ಮೈಗೆ ಸುತ್ತಿಕೊಂಡು ನೃತ್ಯ ಮಾಡುತ್ತಾ ಸಾಗಿದ ಸಿದ್ಧಿ ಮಹಿಳೆಯರು ಮೆರವಣಿಗೆಗೆ ವಿಶೇಷ ಮೆರಗು ನೀಡಿತ್ತು.

ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಸಿ.ಎಸ್.ಪುಟ್ಟರಾಜು,  ತಡವಾಗಿಯಾದರೂ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ರೈತರ ಸಂಕಷ್ಟ ದೂರಾಗುವಂತೆ ಮಾಡಿದೆ. ಕೆರೆಕಟ್ಟೆಗಳು ಭರ್ತಿಯಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ನಾಲ್ಕು ವರ್ಷದಿಂದ ಮಂಡ್ಯ ಯೂತ್ ಗ್ರೂಪ್ ಯಾರ ನೆರವನ್ನೂ ಬಯಸದೆ ಉತ್ತಮವಾಗಿ ಮಂಡ್ಯ  ದಸರೆಯನ್ನು ಆಚರಿಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ದಸರೆ ಇನ್ನಷ್ಟು ವೈಭವದಿಂದ ನಡೆಯಲು  ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X