ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು

ಮಂಡ್ಯ, ಸೆ.30: ಗೆಳೆಯರೊಂದಿಗೆ ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪಾಂಡವಪುರ ತಾಲೂಕಿನ ಎಲೆಕೆರೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಅನಿಲ್ ಸಿಂಗ್ ಎಂಬುವರ ಮಗ ಸಂಜಯ್ ಸಿಂಗ್(12) ಮೃತಪಟ್ಟ ಬಾಲಕ. ಈತ ಡಾಮಡಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೆ ತರಗತಿ ವ್ಯಾಸಂಗ ಮಾಡುತ್ತಿದ್ದನು.
ಶಾಲೆಗೆ ರಜೆ ಇದ್ದ ಕಾರಣ ಗೆಳೆಯರೊಂದಿಗೆ ಗ್ರಾಮದ ಬಳಿ ಹರಿಯುವ ವಿಸಿ ನಾಲೆಯಲ್ಲಿ ಈಜಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





