ಅ.1: ವೆಂಕಟ್ರಮಣ ದೇವಸ್ಥಾನದ ಶಾರದಾ ಮಹೋತ್ಸವದ ಮೆರವಣಿಗೆ
ಮಂಗಳೂರು, ಸೆ. 30: ಮಂಗಳೂರು ರಥ ಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನದ 95ನೆ ಶ್ರೀ ಶಾರದಾ ಮಹೋತ್ಸವ 2017ರ ಶೋಭಾಯಾತ್ರೆ ಅ.1ರಂದು ಕ್ಷೇತ್ರದಿಂದ ನಡೆಯಲಿದೆ.
ಈ ಸಂದರ್ಭದಲ್ಲಿ ಶಾರದಾ ಮಾತೆಯ ಪ್ರತಿಮೆಯ ಮೆರವಣಿಗೆ ಆರಂಭದಲ್ಲಿದ್ದು ಬಳಿಕ ಉಳಿದ ಹುಲಿವೇಶ ಹಾಗೂ ಇತರ ಸಾಂಪ್ರದಾಯಿಕ ತಂಡಗಳು ಮೆರವಣಿಯಲ್ಲಿ ಭಾಗವಹಿಸಲಿವೆ. ಈ ಹಿಂದೆ ಇತರ ಟ್ಯಾಬ್ಲೋಗಳು ಹಾಗೂ ಹುಲಿ ವೇಶ ತಂಡಗಳು ಮೆರವಣಿಯ ಮುಂದುಗಡೆ ಸಾಗುತ್ತಿದ್ದವು ಈ ಬಾರಿಯಿಂದ ಈ ರೀತಿಯ ಬದಲಾವಣೆ ಮಾಡಲಾಗುವುದು ಎಂದು ಕ್ಷೇತ್ರದ ಪ್ರಧಾನ ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಶಾರದಾ ವಿಗ್ರಹದ ಜೊತೆ ವಿವಿಧ ಜಾತಿಗಳನ್ನು ಒಳಗೊಂಡ ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ ಎಂದು ನರಸಿಂಹ ಆಚಾರ್ಯ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಶಾರದಾ ಮಹೋತ್ಸವದ ಪ್ರಧಾನ ಅರ್ಚಕ ಭಾಸ್ಕರ ಭಟ್, ಉತ್ಸವ ಸಮಿತಿಯ ಬಾಲಕೃಷ್ನ ಶೆಣೈ, ಸುರೇಶ್ ಆಚಾರ್ಯ ಮೊದಲಾ ದವರು ಉಪಸ್ಥಿತರಿದ್ದರು.
Next Story





