ಕಲ್ಯಾಣಪುರ: ರಕ್ತದಾನ ಶಿಬಿರ

ಉಡುಪಿ, ಸೆ.30: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೇಂಜರ್ಸ್ ರೋವರ್ಸ್ ಮತ್ತು ಕಲ್ಯಾಣಪುರ ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಹಾಗೂ ಉಡುಪಿ ಮಿಡ್‌ಟೌನ್, ರೋಟರಿ ಕಲ್ಯಾಣ ಪುರ, ರಕ್ತನಿಧಿ ಕುಂದಾಪುರ ಮತ್ತು ಜೇಸಿಐ ಕಲ್ಯಾಣಪುರದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಇತ್ತೀಚೆಗೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಶಿಬಿರವನ್ನು ಕಾಲೇಜಿನ ಸಂಚಾಲಕ ಅತಿ ವಂ.ಸ್ಟಾನಿ ಬಿ.ಲೋಬೋ ಉದ್ಘಾಟಿಸಿದರು. ಕಾಲೇಜಿನ ಫಾ.ಪ್ರಕಾಶ್ ಅನಿಲ್ ಕ್ಯಾಸ್ತೆಲಿನೋ ಉಪಸ್ಥಿತರಿ ದ್ದರು. ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಚೌಹಾನಾ ಇನಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್‌ನ ಧ್ಯಕ್ಷ ಪಿ.ಎ.ಭಟ್ ರಕ್ತದಾನದ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ರೋಟರಿ ಕ್ಲಬ್ ಸಂಚಾಲಕ ನಿತ್ಯಾನಂದ ಶೆಟ್ಟಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಅನುಪಮಾ ಉಪಸ್ಥಿತರಿದ್ದರು. ರೇಂಜರ್ಸ್ ರೋವರ್ಸ್‌ನ ಸಂಚಾಲಕ ಡಾ.ಜಯರಾಮ್ ಶೆಟ್ಟಿಗಾರ್ ಸ್ವಾಗತಿಸಿದರು. ಎನ್‌ಸಿಸಿ ಅಧಿಕಾರಿ ನಾಗರಾಜ್ ವಂದಿಸಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ರವಿನಂದನ್ ಕಾರ್ಯಕ್ರಮ ನಿರೂಪಿಸಿದರು.





