ಗಣಿತಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯಲಿ: ಡಾ.ಶಂಕರ್

ಉಡುಪಿ, ಸೆ.30: ವಿದ್ಯಾರ್ಥಿಗಳು ಗಣಿತಶಾಸ್ತ್ರದ ತಮ್ಮ ಅಧ್ಯಯನವನ್ನು ಸ್ನಾತಕೋತ್ತರ ಪದವಿಗೆ ಸೀಮಿತಗೊಳಿಸದೆ ಸಂಶೋಧನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇರುವ ಅವಕಾಶಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಉತ್ತಮ ಸಂಶೋಧಕ ರಾಗಿ ರೂಪುಗೊಳ್ಳಬೇಕು ಎಂದು ಸುರತ್ಕಲ್ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ ಗಣಿತಶಾಸ್ತ್ರ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಬಿ.ಆರ್. ಶಂಕರ್ ಹೇಳಿದ್ದಾರೆ.
ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಟೋಪೊಲಜಿ ಮತ್ತು ವಿಶ್ಲೇಷಣೆ ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು ಮಾತನಾಡುತಿದ್ದರು.
ಇದೇ ಸಂದರ್ಭದಲ್ಲಿ ಮಂಗಳೂರು ವಿವಿ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಮಾಜಿ ಅಧ್ಯಕ್ಷ ಡಾ.ಎಸ್.ಪರಮೇಶ್ವರ ಭಟ್ಟರನ್ನು ಗೌರವಿಸಲಾ ಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಜಗದೀಶ್ ರಾವ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿವಿ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಧ್ಯಕ್ಷೆ ಡಾ.ಕಿಶೋರಿ ಪಿ.ನಾರಾಯಣಕರ್, ಪುತ್ತೂರು ವಿವೇಕಾನಂದ ಕಾಲೇಜಿನ ಗಣಿತ ಶಾಸ್ತ್ರ ಪ್ರಾಧ್ಯಾಪಕ ಶಂಕರ ನಾರಾಯಣ ಭಟ್, ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷ ಯಶಪಾಲ್ ಸುವರ್ಣ ಭಾಗವಹಿಸಿ ದ್ದರು. ಸಂಪನೂಲ ವ್ಯಕ್ತಿಗಳಾದ ಹಿರಿಯ ಪ್ರಾಧ್ಯಾಪಕ ಕೃಷ್ಣಂಕೋಯಿಲ್, ಕಳಾಸಳಿಂಗಮ್ ವಿವಿ ನಿರ್ದೇಶಕ ಪ್ರೊ.ಆರ್ಮುಗಂ, ಉತ್ತರ ಪ್ರದೇಶ ಶಿವನಾದರ್ ವಿವಿಯ ಡಾ.ಸತ್ಯನಾರಾಯನ ರೆಡ್ಡಿ, ಹಾಸನ ಪಡುವಲಿಪ್ಪೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ವಿನಯ ಕುಮಾರ ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ಆಸ್ಮಾ ಮತ್ತು ಅಮೃತಾ ಕಾರ್ಯಕ್ರಮ ನಿರೂಪಿಸಿ ದರು. ವಿಭಾಗದ ಪ್ರಾಧ್ಯಾಪಕ ಕಾರ್ಯದರ್ಶಿ ಡಾ.ಚಂದ್ರಶೇಖರ್ ಸ್ವಾಗತಿಸಿ ದರು. ಕಾರ್ಯಾಗಾರದ ಸಂಯೋಜಕ ಡಾ.ರವೀಶ್ ಎಂ. ವಂದಿಸಿದರು. ಕರ್ನಾಟಕದ ವಿವಿಧ ವಿವಿ ಮತ್ತು ಕಾಲೇಜುಗಳಿಂದ ಬಂದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು.







