ಕಾಸರಗೋಡು ಅಶೋಕ್ ಕುಮಾರ್‌ಗೆ ‘ಕಾವ್ಯಶ್ರೀ’ ಪ್ರಶಸ್ತಿ ಪ್ರದಾನ

ಮಂಗಳೂರು, ಸೆ. 30: ಡಾ.ಜೀ.ಶಂ.ಪ. ಸಾಹಿತ್ಯವೇದಿಕೆ, ಜಿಲ್ಲಾ ವೀರಶೈವ ಮಹಾಸಭಾ, ಕನ್ನಂಬಾಡಿ ದಿನಪತ್ರಿಕೆ ಮಂಡ್ಯ ಇವರ ವತಿಯಿಂದ ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಮಹಾಮಾನವತಾವಾದಿ, ವಿಶ್ವಗುರು ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡ ಅವರ ಸ್ಮರಣಾರ್ಥ ನಡೆದ 22ನೆರಾಜ್ಯಮಟ್ಟದ ಕವಿಕಾವ್ಯ ಮೇಳದ ವೇಳೆ ಕವಿ ಕಾಸರಗೋಡು ಅಶೋಕ್ ಕುಮಾರ್ ಅವರಿಗೆ ‘ಕಾವ್ಯಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಲ್.ಆರ್.ಶಿವರಾಮೇ ಗೌಡ, ಡಾ.ಚಂಪಾ ವೇದಿಕೆಯ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಚಂದ್ರ, ಎಂ.ಮಧುರ ಅಶೋಕ್ ಕುಮಾರ್, ಡಾ.ಎಚ್. ಎಸ್.ಮುದ್ದೇಗೌಡ ಮೊದಲಾದವರು ಉಪಸ್ಥಿತರಿದ್ದರು.
Next Story





