ಪಲಿಮಾರು ಪರ್ಯಾಯ ಪೂರ್ವಭಾವಿ ಸಭೆ

ಉಡುಪಿ, ಸೆ.30: ಪಲಿಮಾರು ಪರ್ಯಾಯ ಸ್ವಾಗತ ಸಮಿತಿಯ ವತಿ ಯಿಂದ ಪರ್ಯಾಯದ ಪೂರ್ವಭಾವಿ ಕಾರ್ಯ ಸಿಧ್ಧತೆಗಳ ಹಾಗೂ ಇತರ ಚಟುವಟಿಕೆಗಳ ಕುರಿತು ಸಮಿತಿಯ ಗೌರವಾಧ್ಯಕ್ಷರಾಗಿರುವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಸಮಿತಿಯ ಪದಾಧಿಕಾರಿಗಳು ಇತ್ತೀಚೆಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ, ಕೋಶಾಧಿಕಾರಿ ರಮೇಶ್ ರಾವ್ ಬೀಡು, ಪ್ರಧಾನ ಕಾರ್ಯ ದರ್ಶಿ ಪದ್ಮನಾಭ ಭಟ್, ಮಟ್ಟು ಲಕ್ಶ್ಮೀನಾರಾಯಣ, ಪಿ.ಆರ್.ಪ್ರಹಲ್ಲಾದ್ ಮೊದಲಾದವರು ಉಪಸ್ಥಿತರಿದ್ದರು.
Next Story





