7 ಬಬ್ಬರ್ ಖಲ್ಸಾ ಉಗ್ರರ ಬಂಧನ

ಪಂಜಾಬ್, ಸೆ.30: ಲುಧಿಯಾನ ಪೊಲೀಸರೊಂದಿಗೆ ಪಂಜಾಬ್ ಪೊಲೀಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 7 ಮಂದಿ ಬಬ್ಬರ್ ಖಲ್ಸಾ ಉಗ್ರಗಾಮಿಗಳನ್ನು ಬಂಧಿಸಲಾಗಿದೆ.
ತಾಲಿಬಾನ್ ಹಾಗೂ ಖಲಿಸ್ತಾನ್ ವಿರೋಧಿಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಈ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಸುರೀಂದರ್ ಸಿಂಗ್ ಬಬ್ಬರ್ ಹಣಕಾಸಿನ ನೆರವು ನೀಡುತ್ತಿದ್ದ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ಕುಲದೀಪ್ ಸಿಂಗ್, ಜಸ್ಬೀರ್ ಸಿಂಗ್, ಅಮನ್ ಪ್ರೀತ್ ಸಿಂಗ್, ಮನ್ ಪ್ರೀತ್ ಸಿಂಗ್, ಓಂಕಾರ್ ಸಿಂಗ್, ಜುಗ್ರಾಜ್ ಸಿಂಗ್ ಹಾಗೂ ಅಮೃತ್ ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.
“ಬಂಧಿತರು ಸುರೀಂದರ್ ಸಿಂಗ್ ಬಬ್ಬರ್ ನೊಂದಿಗೆ ಫೇಸ್ಬುಕ್ ನಲ್ಲಿ ಸಂಪರ್ಕದಲ್ಲಿದ್ದರು. ಖಲಿಸ್ತಾನ್ ವಿರುದ್ಧ ಧ್ವನಿಯೆತ್ತುವವರನ್ನು ಗುರಿಯಾಗಿಸಲು ಈ ತಂಡ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ನಮ್ಮ ಸಂದರ್ಭೋಚಿತ ದಾಳಿಯಿಂದಾಗಿ ಅವರ ಯೋಜನೆಯನ್ನು ವಿಫಲಗೊಳಿಸಿದೆ ಎಂದವರು ಹೇಳಿದ್ದಾರೆ.
ಬಂಧಿತರಿಂದ 32 ನಾಡ ಪಿಸ್ತೂಲ್ ಗಳನ್ನು, 20 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.





