ಹಿಂದೂ ದೇವರುಗಳ ನಿಂದನೆ: ಪೊಲೀಸ್ ಕಮಿಷನರ್‌ಗೆ ದೂರು
ಮಂಗಳೂರು, ಸೆ. 30: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರುಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂರಕ್ಷಣಾ ಸಮಿತಿ ಹಾಗೂ ಹಾಗೂ ತುಳುನಾಡ ರಕ್ಷಣಾ ವೇದಿಕೆ ಶನಿವಾರ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಸೆ.27ರಂದು ಏಂಗಲ್ ನಯನಾ ಪ್ರಜ್ವಲ್ ಫೇಸ್‌ಬುಕ್ ಪುಟದಲ್ಲಿ ಸಂತೋಷ್ ಉಪ್ಪರ್ ಎಂಬಾತ ಹಿಂದೂ ದೇವತೆಗಳ ನಿಂದನೆಯ ಪೋಸ್ಟ್ ಶೇರ್ ಮಾಡಲಾಗಿದೆ. ಇದರಲ್ಲಿ ತುಳುನಾಡಿನ ಆರಾಧ್ಯ ದೈವಗಳಾದ ಕೊರಗಜ್ಜನ ಬಗ್ಗೆ ಅಶ್ಲೀಲ, ಅವಾಚ್ಯವಾಗಿ ಕಮೆಂಟ್ ಹಾಕಲಾಗಿದೆ. ಈ ರೀತಿ ಪೋಸ್ಟ್ ಹಾಕಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸಮಿತಿ ದೂರಿನಲ್ಲಿ ತಿಳಿಸಿದೆ.
Next Story





