ಸೊರಬ : ಅದ್ದೂರಿಯಾಗಿ ನಡೆದ ದಸರಾ ಉತ್ಸವ

ಸೊರಬ,ಸೆ.30: ದಸರಾ ಉತ್ಸವದ ಅಂತಿಮ ದಿನವಾದ ಶನಿವಾರ ಪಟ್ಟಣದಲ್ಲಿ ವಿಜೃಂಭನೆಯಲ್ಲಿ ನಡೆಯಿತು.
ಮೈಸೂರಿನಲ್ಲಿ ನಡೆಯುವ ಬನ್ನಿ ಉತ್ಸವದ ದಿನದಂದೇ ಪಟ್ಟಣದಲ್ಲಿಯೂ ಅನಾದಿ ಕಾಲದಿಂದ ದಸರಾ ಉತ್ಸವ ನಡೆಯುತ್ತಿರುವ ಕಾರಣದಿಂದ ಪಟ್ಟಣದ ಶ್ರೀ ಲಕ್ಷ್ಮೀ ರಂಗನಾಥ, ಶ್ರೀ ಎಲ್ಲಮ್ಮ ದೇವಿ, ಶ್ರೀ ವಿಠ್ಠಲ ರಖುಮಾಯಿ, ಶ್ರೀ ಪೇಟೆ ಬಸವೇಶ್ವರ, ಶ್ರೀ ದುರ್ಗಮ್ಮ ಮತ್ತು ಮಾರಿಕಾಂಬ, ಶ್ರೀ ನಾಗ ಚೌಡೇಶ್ವರಿ ದೇವರ ಪಲ್ಲಕ್ಕಿ ಉತ್ಸವಗಳು ಮುಖ್ಯಬೀದಿಯಲ್ಲಿ ನಡೆದವು.
ಶ್ರಿ ರಂಗನಾಥ ದೇವಸ್ಥಾನದಲ್ಲಿ ದಸರಾ ಉತ್ಸವ ಸಮಿತಿಯಿಂದ ದುರ್ಗಾದೇವಿಯನ್ನು ಪ್ರತಿಷ್ಟಾಪಿಸಲಾಗಿತ್ತು. 9 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ನಡೆದು ಭಕ್ತರು ಹಾಗು ಸಾಂಸ್ಕೃತಿಕ ಆಸಕ್ತರು ಅದರ ಸವಿಯನ್ನು ಸವಿದರು.
ಪುರೊಹಿತರಾದ ನಾರಾಯಣ ಭಟ ಮರಾಠೆಯವರಿಂದ ಬನ್ನಿ ಮರಕ್ಕೆ ಬಾಣ ಹೊಡೆಯುವ ಮೂಲಕ ಪೂಜಾ ವಿಧಿ-ವಿಧಾನಗನ್ನು ನೆರವೇರಿಸಿದರು. ತಹಶೀಲ್ದಾರ್ ಎಲ್.ಬಿ.ಚಂದ್ರಶೇಖರ್ ನೇತತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಮಧುಬಂಗಾರಪ್ಪ ಕುಟುಂಬ ಸಮೇತರಾಗಿ ಉಪಸ್ಥಿತರಿದ್ದು ಪೂಜಾಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಅಂಬೇಡ್ಕರ್ ಬಡಾವಣೆಯಲ್ಲಿ ಪ್ರತಿಷ್ಟಾಪಿಸಲ್ಪಟ್ಟ ದುರ್ಗಾದೇವಿಯು ಸೇರಿದಂತೆ ಸಮಿತಿಯಿಂದ ಸ್ಥಾಪಿಸಲ್ಪಟ್ಟ ದುರ್ಗಾ ದೇವಿಯನ್ನು ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ದು ದಂಡಾವತಿ ನದಿಯಲ್ಲಿ ವಿಸರ್ಜಿಸಲಾಯಿತು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಮಧುರಾಯ್ ಜಿ. ಶೇಟ್ ಮತ್ತಿತರರು ಯಕ್ಷಗಾನ ವೇಷಧಾರಿಗಳಾಗಿ ವೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಷೇಶವಾಗಿತ್ತು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಝುಲೇಖಾ ಉಪಾಧ್ಯಕ್ಷೆ ರತ್ನಮ್ಮ, ನೇತ್ರಾವತಿ, ಸದಸ್ಯರಾದ ಎಂ.ಡಿ. ಉಮೇಶ್, ಪ್ರಶಾಂತ ಮೇಸ್ತ್ರಿ,ಸುಜಾಯತ್‍ಉಲ್ಲಾ, ಎಂ.ಡಿ.ಉಮೇಶ್, ಡಿ.ಆರ್.ಶ್ರೀಧರ್, ಸಮಿತಿ ಕಾರ್ಯದರ್ಶಿ ಷಣ್ಮುಖಾಚಾರ್ ಪ್ರಮುಖರಾದ ಚಂದ್ರಶೇಖರ ನಿಜಗುಣ, ವಿಹಿಂಪ ಅಧ್ಯಕ್ಷ ಶಿವಮೂರ್ತಿ, ಅನಿತಾಮಧುಬಂಗಾರಪ್ಪ, ಲೋಲಾಕ್ಷಮ್ಮ, ಪಾಣಿರಾಜಪ್ಪ, ಮಹೇಶ ಗೋಖಲೆ, ಮೆಹಬೂಬಿ, ಜೆ.ಶಿವಾನಂದಪ್ಪ, ಎಚ್.ಎಸ್.ಮಂಜಪ್ಪ, ಯು.ಫಯಾಜ್ ಆಹಮದ್, ವಾಮನ ಭಟ್ ಭಾವೆ, ತಿಮ್ಮಣ್ಣಾಚಾರ್ ಸೇರಿದಂತೆ ಪಟ್ಟಣದ ನಾಗರೀಕರು, ಮಕ್ಕಳು, ಮಹಿಳೆಯರು ಪಾಲ್ಗೊಂಡಿದ್ದರು.







