ಬಸ್ ಢಿಕ್ಕಿ : ಬೈಕ್ ಸವಾರ ಮೃತ್ಯು
ಶಿವಮೊಗ್ಗ, ಅ. 1: ಬಸ್‍ವೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ತಾಲೂಕಿನ ಕುಂಚೇನಹಳ್ಳಿ ಗ್ರಾಮದ ಶಿಕಾರಿಪುರ ರಸ್ತೆಯಲ್ಲಿ ನಡೆದಿದೆ.
ಸವಳಂಗದ ಶೇಖರ್ (20) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ಶೇಖರ್ ಅವರು ತನ್ನ ಬೈಕ್ ನಲ್ಲಿ ಸವಳಂಗದಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿದ್ದಾಗ ಬಸ್ ಢಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





