ಮುಂಬೈನಲ್ಲಿ ಹಳಿ ತಪ್ಪಿದ ಸ್ಥಳೀಯ ರೈಲು

ಹೊಸದಿಲ್ಲಿ, ಅ.1: ರೈಲು ಅಪಘಾತ ಸರಣಿಗೆ ಮತ್ತೊಂದು ಸೇರ್ಪಡೆಯೆಂಬಂತೆ ಮುಂಬೈನಲ್ಲಿ ಸ್ಥಳೀಯ ರೈಲೊಂದು ಹಳಿತಪ್ಪಿದೆ. ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ಕರ್ಜಾತ್ ಗೆ ಹೊರಟಿದ್ದ ರೈಲಿನ ಬೋಗಿಗಳು ಹಳಿತಪ್ಪಿದ್ದು, ಯಾರಿಗೂ ಗಾಯಗಳಾಗಿಲ್ಲ.
ಎಲ್ಫಿನ್ ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ನಡೆದು 2 ದಿನಗಳಲ್ಲಿ ಮುಂಬೈನಲ್ಲಿ ಮತ್ತೊಂದು ರೈಲು ಹಳಿ ತಪ್ಪಿದೆ. ಕೆಲ ದಿನಗಳ ಹಿಂದಷ್ಟೇ ಉತ್ತರಪ್ರದೇಶದಲ್ಲಿ ಕಫಿಯಾತ್ ಎಕ್ಸ್ ಪ್ರೆಸ್ ಹಳಿತಪ್ಪಿದ ಪರಿಣಾಮ 80 ಮಂದಿ ಗಾಯಗೊಂಡಿದ್ದರು.
ಆಗಸ್ಟ್ ತಿಂಗಳಲ್ಲಿ ಮುಂಬೈಯ ಮಹಿಮ್ ಸ್ಟೇಶನ್ ಸಮೀಪ ರೈಲೊಂದರ 6 ಬೋಗಿಗಳು ಹಳಿ ತಪ್ಪಿತ್ತು. ಉತ್ತರಪ್ರದೇಶದಲ್ಲಿ ಉತ್ಕಲ್ ಎಕ್ಸ್ ಪ್ರೆಸ್ ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ 24 ಮಂದಿ ಮೃತಪಟ್ಟು 156 ಮಂದಿ ಗಾಯಗೊಂಡಿದ್ದರು.
Next Story





