ಶಿವಮೊಗ್ಗ: ಪ್ರೇಮಿಗಳಿಬ್ಬರ ಹತ್ಯೆ

ಶಿವಮೊಗ್ಗ, ಅ.1: ದುಷ್ಕರ್ಮಿಗಳು ಪ್ರೇಮಿಗಳಿಬ್ಬರನ್ನು ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯ ವಡ್ಡಿನಕೊಪ್ಪ ಹಾಗೂ ಸಂತೆಕಡೂರು ಗ್ರಾಮಗಳ ನಡುವಿನ ನಿರ್ಜನ ಪ್ರದೇಶದಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.
ಇಂದಿರಾನಗರ ಬಡಾವಣೆ ಸಮೀಪದ ಶ್ರೀರಾಮನಗರದ ನಿವಾಸಿಗಳಾದ ರೇವತಿ (23) ಹಾಗೂ ವಿಜಯ್ (25) ಕೊಲೆಗೀಡಾದವರೆಂದು ಗುರುತಿಸಲಾಗಿದೆ.
ರೇವತಿ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ನಡೆಸಲಾಗಿದ್ದರೆ, ವಿಜಯ್‍ಗೆ ಚೂರಿಯಿಂದ ಇರಿದು ತದನಂತರ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಇನ್ ಸ್ಪೆಪೆಕ್ಟರ್ ಮಹಾಂತೇಶ್, ಸಬ್ ಇನ್ ಸ್ಪೆಪೆಕ್ಟರ್ ಗಿರೀಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾಹವಾಗಿತ್ತು: ರೇವತಿಯ ವಿವಾಹವು ಕಳೆದ ಕೆಲ ತಿಂಗಳ ಹಿಂದೆ ವೆಂಕಟೇಶ್‍ನಗರದ ನಿವಾಸಿ ಕಾರ್ತಿಕ್ ಎಂಬಾತನೊಂದಿಗೆ ನಡೆದಿತ್ತು. ಆದರೆ ರೇವತಿಯು ತಾನು ಪ್ರೀತಿಸುತ್ತಿದ್ದ ವಿಜಯ್ ಎಂಬಾತನೊಂದಿಗೆ ತೆರಳಿದ್ದರು. ಬಳಿಕ ಪೊಲೀಸರು ರೇವತಿಯನ್ನು ಪತ್ತೆ ಹಚ್ಚಿ ಪತಿಯ ಮನೆಗೆ ಕಳುಹಿಸಿ ಕೊಟ್ಟಿದ್ದರು. ಆದರೆ ಸೆ. 27 ರಂದು ಮತ್ತೆ ರೇವತಿಯು ವಿಜಯ್ ಜತೆ ನಾಪತ್ತೆಯಾಗಿದ್ದಳು. ಈ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಇದೀಗ ನಾಪತ್ತೆಯಾಗಿದ್ದ ಪ್ರೇಮಿಗಳು ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮದುವೆಯಾದ ನಂತರವೂ ರೇವತಿ ತನ್ನ ಹಳೇ ಪ್ರೇಮಿಯೊಂದಿಗೆ ಸಂಬಂಧ ಹೊಂದಿದ್ದೆ ಈ ಹತ್ಯೆಗೆ ಕಾರಣವಾಯಿತೆ ಎಂಬುವುದನ್ನು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.







