ಬಿಕೋ ಎನ್ನುತ್ತಿರುವ ಮೈಸೂರು ಅರಮನೆ

ಮೈಸೂರು, ಅ.1: ದಸರಾ ಹಿನ್ನೆಲೆಯಲ್ಲಿ ಹತ್ತು ದಿನಗಳ ಕಾಲ ಇಡೀ ವಿಶ್ವದ ಗಮನ ಸೆಳೆದಿದ್ದ ಮೈಸೂರು ಅರಮನೆಯ ಆವರಣದಲ್ಲಿಂದು ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಂಬೂಸವಾರಿ ಮೆರವಣಿಗೆ ಮರುದಿನ ರವಿವಾರ ಅರಮೆನ ಆವರಣದಲ್ಲಿ ಸ ಸ್ವಚ್ಛತಾ ಕಾರ್ಯ ಆರಂಭವಾಗಿತ್ತು. ಜಂಬೂ ಸವಾರಿ ಮೆರವಣಿಗೆಯಲ್ಲಿ ಸುಲಲಿತವಾಗಿ ಚಿನ್ನದ ಅಂಬಾರಿ ಹೊತ್ತು ಸಾಗಿ ರಂಗು ತಂದ ಅರ್ಜುನ ನೇತೃತ್ವದ ಗಜಪಡೆ ಇಂದು ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿವೆ. ಗಜಪಡೆಗಳನ್ನು ನೀರಿನಿಂದ ಸ್ವಚ್ಛಗೊಳಿಸಲಾಗುತ್ತಿತ್ತು. ಗಜಪಡೆಯ ಮಾವುತರು, ಕಾವಾಡಿಗಳು ತಮ್ಮ ತಮ್ಮ ಸ್ವಸ್ಥಾನಗಳಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ಗಜಪಡೆಗಳ ಮಾವುತರು ಮತ್ತು ಕಾವಾಡಿಗಳ ಕುಟುಂಬದವರು ನಗರದ ಕೆಲವು ಅಂಗಡಿಗಳಿಗೆ ತೆರಳಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ನಾಡಿನಿಂದ ಕಾಡಿಗೆ ತೆರಳುತ್ತಿದ್ದೇವೆ ಎಂಬ ಸಂಭ್ರಮ ಒಂದು ಕಡೆಯಾದರೆ, ಕಳೆದ ಒಂದು ತಿಂಗಳಿನಿಂದ ಅರಮನೆ ಆವರಣದಲ್ಲಿ ಅವರಿಗೆ ಸಿಕ್ಕ ಆತಿಥ್ಯ ಕಂಡು ಸಂತಸ ಪಟ್ಟರು.
Next Story





