ಹಣ ವಂಚನೆ ಪ್ರಕರಣ: ನಟರಾಜನ್ ವಿರುದ್ಧ ಕ್ರಮ ಜರಗಿಸಲು ಸುಪ್ರೀಂ ಸೂಚನೆ

ಹೊಸದಿಲ್ಲಿ, ಅ.1: ಹೂಡಿಕೆದಾರರಿಂದ ಸುಮಾರು 68.50 ಕೋಟಿ ರೂ. ಬಂಡವಾಳ ಸಂಗ್ರಹಿಸಿ, ಬಳಿಕ ಅದನ್ನು ಮರಳಿಸಲು ವಿಫಲವಾದ ಚೆನ್ನೈ ಮೂಲದ ಪಿಎನ್‌ಎಲ್ ನಿಧಿ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದ, ಇದೀಗ ಶ್ರೀರಾಮ್ ಸಮೂಹ ಸಂಸ್ಥೆಯ ನಿರ್ದೇಶಕರಾಗಿರುವ ಎಸ್.ನಟರಾಜನ್ ವಿರುದ್ಧ ಕ್ರಮ ಜರಗಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಅಲ್ಲದೆ ನಟರಾಜನ್ ವಿರುದ್ಧ ದಾಖಲಿಸಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿರುವ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.ಖಾಸಗಿ ಹಣಕಾಸು ಸಂಸ್ಥೆ ಹಾಗೂ ನಟರಾಜನ್ ಸೇರಿದಂತೆ ಹಲವರು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, 13,295 ಮಂದಿಯಿಂದ ಒಟ್ಟು 68.50 ಕೋಟಿ ರೂ. ಸಂಗ್ರಹಿಸಿದ್ದಾರೆ. ಆದರೆ ವಾಪಸ್ ನೀಡಿಲ್ಲ ಎಂದು ಆರೋಪಿಸಲಾಗಿದೆ.
Next Story





