ದೋಣಿ ಮಗುಚಿ ಮೀನುಗಾರ ಮೃತ್ಯು
ಬೈಂದೂರು, ಅ.1: ಉಪ್ಪುಂದ ಗ್ರಾಮದ ಕರ್ಕಿಕಳಿ ಬಳಿ ಶನಿವಾರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಪಾತಿ ದೋಣಿ ಅಲೆಗೆ ಸಿಲುಕಿ ಕವುಚಿ ಬಿದ್ದ ಪರಿಣಾಮ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಕರ್ಕಿಕಳಿಯ ದುರ್ಗ ಖಾರ್ವಿ ಎಂದು ಗುರುತಿಸಲಾಗಿದೆ. ಇವರು 50ಮೀಟರ್ ದೂರದ ಸಮುದ್ರದಲ್ಲಿ ತನ್ನ ಪಾತಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಅಲೆಗೆ ಸಿಲುಕಿ ಕವುಚಿ ಬಿತ್ತೆನ್ನಲಾಗಿದೆ. ಇದರಿಂದ ದುರ್ಗ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





