ಜುಗಾರಿ: ಮೂವರ ಬಂಧನ
ಮಲ್ಪೆ, ಅ.1: ಕಡೆಕಾರ್ ಗ್ರಾಮದ ಆಶಾ ಜ್ಯೋತಿ ಬಾರಿನ ಹಿಂಬದಿಯಲ್ಲಿ ಅ.1ರಂದು ಮಧ್ಯಾಹ್ನ ವೇಳೆ ಉಲಾಯಿ ಪಿದಾಯಿ ಇಸ್ಪೀಟು ಜುಗಾರಿ ಆಡುತ್ತಿದ್ದ ಮೂವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಬೊಗ್ಗಬೆಟ್ಟುವಿನ ರಂಗ ಶಶಿ(31), ದಿನೇಶ(65), ಅಂಬಲಪಾಡಿಯ ಚಂದ್ರ(65) ಬಂಧಿತರು. ಇವರಿಂದ 1100ರೂ. ನಗದು ಹಣವನ್ನು ವಶಪಡಿಸಿ ಕೊಳ್ಳಲಾಗಿದೆ.ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story