ವಿದ್ಯುತ್ ತಂತಿ ತುಳಿದು ಮಹಿಳೆ ಮೃತ್ಯು
ಕೋಟ, ಅ.1: ಗದ್ದೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ಕೋಡಿ ಕನ್ಯಾನ ಗ್ರಾಮ ಪಂಚಾಯತ್ ಕಛೇರಿ ಬಳಿ ನಡೆದಿದೆ.
ಮೃತರನ್ನು ಕೋಡಿಕನ್ಯಾನ ಗ್ರಾಪಂ ಕಛೇರಿ ಬಳಿಯ ನಿವಾಸಿ ಶ್ರೀಮತಿ(47) ಎಂದು ಗುರುತಿಸಲಾಗಿದೆ. ಇವರು ಮನೆಯ ಜಾನುವಾರುಗಳಿಗೆ ಹುಲ್ಲು ತರಲು ಅವರದೆ ಗದ್ದೆ ಬಯಲಿಗೆ ಹೋಗಿದ್ದು, ಅಲ್ಲಿ ಆಕಸ್ಮಿಕವಾಗಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದರೆನ್ನಲಾಗಿದೆ. ಇದರಿಂದ ಅವರ ಎರಡು ಕಾಲಿಗೆ ತೀವ್ರ ಸುಟ್ಟ ಗಾಯವಾಗಿ ಮೃತಪಟ್ಟಿದ್ದಾರೆನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story