ಸುಲಿಗೆ ಪ್ರಕರಣ: ಇಕ್ಬಾಲ್ ಕಸ್ಕರ್‌ಗೆ ನ್ಯಾಯಾಂಗ ಬಂಧನ

ಥಾಣೆ, ಅ. 2: ಸುಲಿಗೆ ಪ್ರಕರಣದ ಇಬ್ಬರು ಆರೋಪಿಗಳಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಿರಿಯ ಸಹೋದರ ಇಕ್ಬಾಲ್ ಕಸ್ಕಾರ್ ಹಾಗೂ ಇತರ ಇಬ್ಬರಿಗೆ ಥಾಣೆ ನ್ಯಾಯಾಲಯ ಅಕ್ಟೋಬರ್ 13ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ನಾಲ್ಕನೇ ಆರೋಪಿಯಾಗಿರುವ ಪಂಕಜ್ ಗಂಗ್ವಾರ್‌ನ ಪೊಲೀಸ್ ಕಸ್ಟಡಿಯನ್ನು ಅಕ್ಟೋಬರ್ 5ರ ವರೆಗೆ ವಿಸ್ತರಿಸಿದೆ.
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಗುರುವಾರ ಥಾಣೆ ಕ್ರೈಮ್ ಬ್ರಾಂಚ್ ಉದ್ಯಮಿ ಪಂಕಜ್ ಗಂಗ್ವಾರ್ ಅವರನ್ನು ಬಂಧಿಸಿತ್ತು.
ಸೆಪ್ಟಂಬರ್ 26ರಂದು ಜಾರಿ ನಿರ್ದೇಶನಾಲಯ ಕಸ್ಕಾರ್ ಹಾಗೂ ಅವರ ಸಹವರ್ತಿಗಳಾದ ಇಸ್ರಾರ್ ಝಡ್ ಸೈಯದ್, ಮುಮ್ತಾಝ್ ಎ. ಶೇಖ್ ಹಾಗೂ ಇತರರ ವಿರುದ್ಧ ತನಿಖೆ ಆರಂಭಿಸಿತ್ತು.
Next Story





