ಮನೆಗೆ ನುಗ್ಗಿ 2.44ಲಕ್ಷ ವೌಲ್ಯದ ಚಿನ್ನಾಭರಣ ಕಳವು
ಉಡುಪಿ, ಅ.1: ಪುತ್ತೂರು ಗ್ರಾಮದ ಸಂತೆಕಟ್ಟೆ ಎಲ್‌ವಿಟಿ ಬಳಿಯ ಮನೆ ಯೊಂದಕ್ಕೆ ಶನಿವಾರ ನುಗ್ಗಿದ ಕಳ್ಳರು ಲಕ್ಷಾಂತರು ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಪುತ್ತೂರು ಎಲ್‌ವಿಟಿ ಸಮೀಪದ ನಿವಾಸಿ ಮಾಧವ ಶೇಟ್ ತನ್ನ ಕುಟುಂಬ ದೊಂದಿಗೆ ಸೆ.30ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಶಾರದೋತ್ಸವದ ಪ್ರಯುಕ್ತ ಎಲ್‌ವಿಟಿ ದೇವಸ್ಥಾನಕ್ಕೆ ಹೋಗಿದ್ದು, ರಾತ್ರಿ 1:30ರ ಸುಮಾರಿಗೆ ಮನೆಗೆ ಮರಳಿದ್ದರು. ಇಂದು ಬೆಳಗ್ಗೆ ಎಂಟು ಗಂಟೆಗೆ ಎದ್ದು ನೋಡಿದಾಗ ಮಾಡಿನ ಹೆಂಚು ತೆಗೆದಿರುವುದು ಕಂಡುಬಂತು. ಇದರಿಂದ ಅನುಮಾನ ಗೊಂಡ ಮಾಧವ ಶೇಟ್ ಗ್ರೋದೇಜ್ ಕಪಾಟು ನೋಡಿದಾಗ ಚಿನ್ನಾಭರಣ ಕಳವಾಗಿರುವುದು ತಿಳಿದುಬಂತು.
ಮನೆಯವರು ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಹಾಲ್‌ನ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಕಾಪಾಟಿನ ಲಾಕರ್‌ನಲ್ಲಿದ್ದ 15 ಪವನ್ ತೂಕದ ಚಿನ್ನದ ನೆಕ್ಲೇಸ್, ಪೆಂಡೆಂಟ್, ರೋಪ್ ಚೈನ್, ಹವಳದ ಸರ, ಮುತ್ತಿನ ಹಾರ, ಉಂಗುರಗಳು, ಕಿವಿಯೋಲೆ, ಬ್ರೆಸ್ಲೈಟ್ ಹಾಗೂ 8 ಗ್ರಾಂ ತೂಕದ ಬೆಳ್ಳಿಯ ತುಳಸಿ ಮಣಿ ಮಾಲೆಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 2,44,500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





