ಬ್ಲೂವೇಲ್ ಆಡಿದ ಇಬ್ಬರು ವಿದ್ಯಾರ್ಥಿನಿಯರು ಕಾಲೇಜ್‌ನಿಂದ ಉಚ್ಚಾಟನೆ

ಲಾಹೋರ್,ಸೆ.30: ಜಗತ್ತನ್ನೇ ತಲ್ಲಣಗೊಳಿಸಿರುವ ಮಾರಣಾಂತಿಕ ’ಬ್ಲೂವೇಲ್’ ಮೊಬೈಲ್‌ಗೇಮ್‌ನ ಪಿಡುಗು ಈಗ ಪಾಕಿಸ್ತಾನವನ್ನೂ ಬಾಧಿಸಿದೆ. ಬ್ಲೂವೇಲ್ ಚಾಲೆಂಜ್ ಆಟದ ಭಾಗವಾಗಿ ತಮ್ಮ ಕೈಗಳನ್ನು ಹರಿತವಾದ ಚಾಕುವಿನಿಂದ ಗೀರಿ ಗಾಯಗೊಳಿಸಿದ್ದ ಪಂಜಾಬ್ ಪ್ರಾಂತದ ಇಬ್ಬರು ಕಾಲೇಜ್ ವಿದ್ಯಾರ್ಥಿನಿಯರನ್ನು ಉಚ್ಚಾಟಿಸಲಾಗಿದೆ.
ಪಿಂಡ್ ದಾದನ್ ಖಾನ್ ಜೇಲಂ ನಗರದ ಸರಕಾರಿ ಮಹಿಳಾ ಪದವಿ ಕಾಲೇಜ್‌ನ ಇಬ್ಬರು ಮಾಧ್ಯಮಿಕ ತರಗತಿಯ ವಿದ್ಯಾರ್ಥಿನಿಯರು ಬ್ಲೂವೇಲ್ ಗೇಮ್ ಆಟವಾಡುತ್ತಿರುವುದು ಬೆಳಕಿಗೆ ಬಂದಿದೆ.ಬ್ಲೂವೇಲ್ ಚಾಲೆಂಜ್‌ನ ಭಾಗವಾಗಿ ಈ ವಿದ್ಯಾರ್ಥಿನಿಯರು ತಮ್ಮ ಕೈಗಳಿಗೆ ತಾವೇ ಗಾಯ ಮಾಡಿಕೊಂಡಿರುವುದು ಪತ್ತೆಯಾಗಿದೆಯೆಂದು ಕಾಲೇಜ್ ಪ್ರಾಂಶುಪಾಲೆ ರಹೀಲಾ ಚಂದಾನಿ ತಿಳಿಸಿದ್ದಾರೆ.
ಈ ಇಬ್ಬರು ವಿದ್ಯಾರ್ಥಿನಿಯರು ಬ್ಲೂವೇಲ್ ಚಾಲೆಂಜ್‌ನ 18ನೇ ಹಂತಕ್ಕೆ ತಲುಪಿದ್ದರೆ, ಇನ್ನೊಬ್ಬಾಕೆ 22ನೇ ಹಂತದಲ್ಲಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ಬ್ಲೂವೇಲ್ ಚ್ಯಾಲೆಂಜ್‌ನಲ್ಲಿ ಪಾಲ್ಗೊಂಡು ನೂರಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ರಶ್ಯವೊಂದರಲ್ಲೇ ಕನಿಷ್ಠ 130 ಮಂದಿ ಹದಿಹರೆಯದವರು ಈ ಮಾರಣಾಂತಿಕ ಮೊಬೈಲ್ ಗೇಮ್‌ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.





