ಕ್ರಿಕೆಟಿಗ ಮುರಳಿ ವಿಜಯ್-ನಿಕಿತಾ ದಂಪತಿಗೆ ಮೂರನೆ ಮಗು ಜನನ
ಚೆನ್ನೈ, ಅ.2: ಭಾರತದ ಆರಂಭಿಕ ಆಟಗಾರ ಮುರಳಿ ವಿಜಯ್ ಹಾಗೂ ನಿಕಿತಾ ದಂಪತಿಗೆ ಸೋಮವಾರ ಮೂರನೆ ಮಗು ಜನಿಸಿದೆ. ವಿಜಯ್ರ ಹಿರಿಯ ಮಗ ನವಜಾತ ಶಿಶುವನ್ನು ಎತ್ತಿಕೊಂಡಿರುವ ಚಿತ್ರವನ್ನು ಹಾಕಿರುವ ವಿಜಯ್ ಈ ವಿಷಯವನ್ನು ಬಹಿರಂಗಪಡಿಸಿದರು.
‘‘ಇಬ್ಬರು ರಾಕ್ಸ್ಟಾರ್ಗಳು!!ಒಬ್ಬ ಮತ್ತೊಬ್ಬನನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದಾನೆ’’ ಎಂದು ವಿಜಯ್ ಚಿತ್ರ ಸಹಿತ ಟ್ವೀಟ್ ಮಾಡಿದ್ದಾರೆ.
2012ರಲ್ಲಿ ನಿಕಿತಾರನ್ನು ವಿವಾಹವಾಗಿರುವ ವಿಜಯ್ಗೆ ಈಗಾಗಲೇ ಒಂದು ಗಂಡು ಹಾಗೂ ಹೆಣ್ಣು ಮಗುವಿದೆ.
ಸೀಮಿತ ಓವರ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ವಿಜಯ್ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಆಯ್ಕೆಯ ಆರಂಭಿಕ ಆಟಗಾರನಾಗಿದ್ದಾರೆ. ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು.
ಪ್ರಸ್ತುತ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ವಿಜಯ್ ಶ್ರೀಲಂಕಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಆಡಿರಲಿಲ್ಲ. ವಿಜಯ್ ಬದಲಿಗೆ ಶಿಖರ್ ಧವನ್ ಟೆಸ್ಟ್ ಕ್ರಿಕೆಟ್ನಲ್ಲಿ ಇನಿಂಗ್ಸ್ ಆರಂಭಿಸಿದ್ದರು.
ತಮಿಳುನಾಡಿನ ಪರ ರಣಜಿ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಆಡುವ ನಿರೀಕ್ಷೆಯಲ್ಲಿರುವ ವಿಜಯ್ ದಕ್ಷಿಣ ಆಫ್ರಿಕ ಪ್ರವಾಸದ ವೇಳೆ ಭಾರತ ತಂಡಕ್ಕೆ ವಾಪಸಾಗುವ ವಿಶ್ವಾಸದಲ್ಲಿದ್ದಾರೆ..