ಮಡಿಕೇರಿ: ಗೃಹಿಣಿ ಆತ್ಮಹತ್ಯೆ
ಮಡಿಕೇರಿ, ಅ.2: ಗೃಹಿಣಿಯೊಬ್ಬರು ರಿವಾಲ್ವರ್ ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸುಬ್ರಹ್ಮಣ್ಯ ನಗರದಲ್ಲಿ ಸೋಮವಾರ ನಡೆದಿದೆ.
ನಗರದ ನಿವಾಸಿ ಗಣೇಶ್ ಶೆಣೈ ಎಂಬವರ ಪತ್ನಿ ವಾಣಿ ಶೆಣೈ(46) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ.
ಭಾಗಮಂಡಲದ ಕಾಶೀಮಠದ ಔಷಧಿವನದ ಮೇಲ್ವಿಚಾರಕರಾಗಿರುವ ಗಣೇಶ್ ಶೆಣೈ ಎಂದಿನಂತೆ ಸೋಮವಾರ ಕರ್ತವ್ಯಕ್ಕೆ ತೆರಳಿದ್ದು, ಈ ಸಂದರ್ಭ ಮನೆಯಲ್ಲಿದ್ದ ವಾಣಿ ಅವರು ತಮ್ಮ ಮಾವನಿಗೆ ಸೇರಿದ ರಿವಾಲ್ವರ್‍ನಿಂದ ಕುತ್ತಿಗೆ ಭಾಗಕ್ಕೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
9ನೆ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ತಮ್ಮ ಪುತ್ರನ ಅಶಿಸ್ತಿನ ವರ್ತನೆಯಿಂದ ವಾಣಿ ಬೇಸತ್ತಿದ್ದರು ಎಂದು ಹೇಳಲಾಗಿದೆ. ಆಕೆ ತನ್ನ ಪತಿಯ ಬಳಿ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





