ಪರಿಹಾರಧನದ ಚೆಕ್ ವಿತರಣೆ

ಮಂಗಳೂರು, ಅ. 2: ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅರ್ಜಿದಾರ ಎಸ್. ಮನ್ವಿತಾ ಬಿನ್ ಸುರೇಶ್ ಬಂಗೇರ ಅವರಿಗೆ 2.00ಲಕ್ಷ ಪರಿಹಾರ ಧನದ ಚೆಕ್‌ನ್ನು ಶಾಸಕರ ಕಚೇರಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ಸದಸ್ಯ ಜೆ. ನಾಗೇಂದ್ರ ಕುಮಾರ್, ಶಶಿಕಾಂತ್ ಶೆಟ್ಟಿ, ನವೀನ್ ಸ್ಟೀವನ್ , ಪ್ರಕಾಶ್ ಕೊಟ್ಟಾರಿ, ಅನಿಲ್ ಕೊಟ್ಟಾರಿ, ಶೇಖರ್ ಸನಿಲ್, ಸುಧೀರ್ ಆಳ್ವ ತಾದೋಲ್ಯ, ಉದಯ್ ಕೊಟ್ಟಾರಿ ಬಜಾಲ್ , ಹಬೀಬುಲ್ಲಾ ಕಣ್ಣೂರು, ಎನ್.ಪಿ. ಮನುರಾಜ್, ಲಿಯೋ ಡಿಸೋಜಾ, ಅನಿಲ್ ತೋರಸ್ ಮುಂತಾದವರು ಉಪಸ್ಥಿತರಿದ್ದರು.
Next Story





