ಮರದ ಕೊಂಬೆಬಿದ್ದು ಮೂವರಿಗೆ ಗಾಯ
ಬೆಂಗಳೂರು, ಅ.2: ನಗರದಲ್ಲಿ ರವಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮರದ ಕೊಂಬೆಯೊಂದು ಎರಡು ಕಾರುಗಳ ಮೇಲೆ ಬಿದ್ದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಉಪ್ಪಾರಪೇಟೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಾಂಧಿ ನಗರದ ಸಿಂಡಿಕೇಟ್ ಬ್ಯಾಂಕ್ ಬಳಿ ರಾತ್ರಿ 10 ಗಂಟೆಯ ಸಂದರ್ಭದಲ್ಲಿ ಬೃಹದಾಕಾರದ ಮರದ ಕೊಂಬೆಯೊಂದು ಕಾರುಗಳ ಮೇಲೆ ಬಿದ್ದಿದೆ. ಕಾರುಗಳು ಸಂಪೂರ್ಣ ಜಖಂಗೊಂಡಿವೆ.
ಈ ವೇಳೆ ಕಾರಿನಲ್ಲಿದ್ದ ಅಬ್ದುಲ್ ಅಸಾದ್(30), ಇಮ್ರಾನ್ ಮನ್ಸೂರ್(22) ಮತ್ತು ಇಕ್ಬಾಲ್(32) ಎಂಬವವರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
Next Story





