ಬೋರುಗುಡ್ಡೆ ಮದರಸ: ಎಸ್ಕೆಎಸ್ ಬಿವಿ ಪದಾಧಿಕಾರಿಗಳ ಆಯ್ಕೆ

ಫರಂಗಿಪೇಟೆ, ಅ. 2: ಸಮಸ್ತ ಕೇರಳ ಕೇರಳ ಜಮ್ ಇಯ್ಯತುಲ್ ಮುಅಲ್ಲಿಮೀನ್ ಇದರ ಅದೀನದಲ್ಲಿರುವ ಅಡ್ಯಾರ್ ಕಣ್ಣೂರು ರೇಂಜ್ ಗೆ ಒಳಪ್ಪಟ್ಟು ಬದ್ರಿಯಾ ಹಯಾತುಲ್ ಇಸ್ಲಾಮ್ ಮದರಸ ಬೋರುಗುಡ್ಡೆ ಇದರ ವಿದ್ಯಾರ್ಥಿ ಸಂಘಟನೆ ಸುನ್ನೀ ಬಾಲವೇದಿಯ ಮಹಾಸಭೆ ಮದರಸದ ಪ್ರಧಾನ ಅದ್ಯಾಪಕ ಅಶ್ರಫ್ ಅಝ್ಹರಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಮದರಸ ಅದ್ಯಾಪಕ ತಸ್ಲೀಮ್ ಅರ್ಶದಿ, ಅಬ್ದುಲ್ ಖಾದರ್ ಮದನಿ, ಮುಅತ್ತಿಬ್ ಅರ್ಶದಿ, ಸುಲೈಮಾನ್ ಮೌಲವಿ, ಸಾದಿಖ್ ಮುಸ್ಲಿಯಾರ್ ಉಪಸ್ಥಿತಿಯಲ್ಲಿ 2017-18 ಸಾಲಿಗೆ ನೂತನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು,
ಗೌರವಾಧ್ಯಕ್ಷರಾಗಿ ಅಶ್ರಫ್ ಅಝ್ಹರಿ, ಚೇರ್ಮೇನರಾಗಿ ತಸ್ಲೀಮ್ ಅರ್ಶದಿ, ಕನ್ವೀನರಾಗಿ ಅಬ್ದುಲ್ ಖಾದರ್ ಮದನಿ ಅದ್ಯಕ್ಷರಾಗಿ ರಾಝಿಕ್, ಪ್ರಧಾನ ಕಾರ್ಯದರ್ಶಿಯಾಗಿ ಆಬ್ದುಲ್ ಸಲಾಮ್, ಉಪಾಧ್ಯಕ್ಷರಾಗಿ ರಾಝಿಕ್ ಮತ್ತು ಅಬ್ದುಲ್ ರಹ್ಮಾನ್ ಜೊತೆ ಕಾರ್ಯದರ್ಶಿಯಾಗಿ ಫಾರೂಕು, ರಾಯಿಝ್, ಕೊಶಾಧಿಕಾರಿಯಾಗಿ ಆಶಿಕ್, ರೇಂಜ್ ಕೌನ್ಸಿಲರಾಗಿ ಮಕ್ಸೂದು, ನಿಸಾದ್, ಸಾಹಿಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಹಿಮಾನ್, ಫವಾಝ್, ಕೈಫ್, ತಬ್ಶೀರ್, ಮಿಸ್ಬಾಹ್, ಸಿನಾನ್, ಆಶಿಮ್, ಮುಝಮ್ಮಿಲ್, ಪರ್ಹಾತ್, ನಿಝಾರ್, ರಾಝಿಕ್, ಶಜಿದ್, ಶುಹೈಲ್, ನಿಯಾಝ್ ರನ್ನು ಆಯ್ಕೆ ಮಾಡಲಾಯಿತು.







