ರಸ್ತೆ ಅಪಘಾತ: ಬೈಕ್ ಸವಾರರಿಬ್ಬರಿಗೆ ಗಾಯ
ಪುತ್ತೂರು, ಅ.2 : ಬೈಕ್ ಮತ್ತು ಕಾರೊಂದು ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಜಂಕ್ಷನ್ ಬಳಿ ಮಾಣಿ ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದೆ.
ಬೈಕ್ ಸವಾರ ಕಾಸರಗೋಡು ತಾಲೂಕಿನ ಕಾಟುಕುಕ್ಕೆ ಸಮೀಪದ ಬಾಳೆಮೂಲೆ ನಿವಾಸಿ ವಸಂತ (38) ಮತ್ತು ಸಹ ಸವಾರ ಶರಣಪ್ಪ ಎಂಬವರು ಗಾಯಗೊಂಡಿದ್ದು, ಅವರಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





