ಯುವತಿಗೆ ಚುಡಾವಣೆ: ಆರೋಪಿ ಸೆರೆ
ಪುತ್ತೂರು, ಅ. 2: ಯುವತಿಯೋರ್ವಳಿಗೆ ಕೈ ಸನ್ನೆ ಮಾಡಿ ಚುಡಾವಣೆ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಸಂಪ್ಯ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನ ಪಡವನ್ನೂರು ಗ್ರಾಮದವನಾಗಿದ್ದು, ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಎಂಬಬಲ್ಲಿ ತನ್ನ ಪತ್ನಿಯ ಮನೆಯಲ್ಲಿ ವಾಸ್ತವ್ಯ ಹೊಂದಿರುವ ಉಮ್ಮರ್ ಫಾರೂಕ್ (26) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಪಡವನ್ನೂರು ಗ್ರಾಮದ ಹೊನಪ್ಪ ನಾಯ್ಕ ಎಂಬವರ ಪುತ್ರಿ ರಮ್ಯಾ ಎಂ (19) ಸುಳ್ಯಪದವು ಪೇಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಗುರುವಾರ ಮಧ್ಯಾಹ್ನ ಪಡುವನ್ನೂರು ಗ್ರಾಮದ ಇಂದಾಜೆ ಎಂಬಲ್ಲಿ ಸ್ಕೂಟರಿನಲ್ಲಿ ಬಂದ ಆರೋಪಿ ಸ್ಕೂಟರಿನಲ್ಲಿ ಕುಳಿತುಕೊಳ್ಳವಂತೆ ಬಲವಂತ ಮಾಡಿ, ಆಕ್ಷೇಪಿಸಿದ ವೇಳೆ ಕೈ ಸನ್ನೆ ಮಾಡಿ ಚುಡಾಯಿಸಿರುವುದಾಗಿ ಆರೋಪಿಸಲಾಗಿದೆ.
ಯುವತಿ ಈ ವಿಚಾರವನ್ನು ಅಂಗಡಿ ಮಾಲಕರಿಗೆ ತಿಳಿಸಿದ್ದು, ಮರುದಿನ ಸಂಪ್ಯ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಂಪ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.





