ನವೆಂಬರ್, ಡಿಸೆಂಬರ್‌ನಲ್ಲಿ ಭಾರತ-ಶ್ರೀಲಂಕಾ ಸರಣಿ

ಹೊಸದಿಲ್ಲಿ, ಅ.2: ಟೀಮ್ ಇಂಡಿಯಾ ನವೆಂಬರ್ 16 ರಿಂದ ಡಿಸೆಂಬರ್ 24ರ ತನಕ ಶ್ರೀಲಂಕಾ ವಿರುದ್ಧ ಮೂರು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳ ಆತಿಥ್ಯವಹಿಸಿಕೊಳ್ಳಲಿದೆ ಎಂದು ಕ್ರಿಕ್ ಇನ್‌ಫೋ ವರದಿ ಮಾಡಿದೆ.
ನವೆಂಬರ್‌ನಲ್ಲಿ ಕೋಲ್ಕತಾದಲ್ಲಿ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಶ್ರೀಲಂಕಾ ತಂಡ ಭಾರತ ಪ್ರವಾಸವನ್ನು ಆರಂಭಿಸಲಿದೆ. ನಾಗ್ಪುರ ಹಾಗೂ ಹೊಸದಿಲ್ಲಿಯಲ್ಲಿ 2 ಹಾಗೂ 3ನೆ ಟೆಸ್ಟ್ ಪಂದ್ಯವನ್ನು ಆಡಲಿದೆ.
ಆರು ವಾರಗಳ ಕಾಲ ನಡೆಯಲಿರುವ ಸುದೀರ್ಘ ಪ್ರವಾಸದಲ್ಲಿ ಶ್ರೀಲಂಕಾ ತಂಡ ಅಭ್ಯಾಸ ಪಂದ್ಯವನ್ನು ಆಡಲಿದೆ. ಟೆಸ್ಟ್ ಸರಣಿಯ ಬಳಿಕ ಉಭಯ ತಂಡಗಳು ಧರ್ಮಶಾಲಾದಲ್ಲಿ ಮೊದಲ ಏಕದಿನ ಪಂದ್ಯವನ್ನಾಡಲಿವೆ. ಡಿ.13 ಹಾಗೂ 17 ರಂದು ಕ್ರಮವಾಗಿ 2ನೆ ಹಾಗೂ 3ನೆ ಏಕದಿನ ಪಂದ್ಯವನ್ನಾಡಲಿದೆ.
ಬಿಸಿಸಿಐ ವೇಳಾಪಟ್ಟಿಯನ್ನು ಇನ್ನಷ್ಟೇ ಖಚಿತಪಡಿಸಬೇಕಾಗಿದೆ. ಇನ್‌ಎಸ್‌ಪಿಎನ್ ಹೆಚ್ಚಿನ ಆತಿಥೇಯ ಕೇಂದ್ರಗಳ ವೇಳಾಪಟ್ಟಿಯನ್ನು ಪರಿಶೀಲಿಸಿದೆ ಎಂದು ವರದಿಯಾಗಿದೆ. ಟ್ವೆಂಟಿ-20 ಸರಣಿ ಡಿ.20 ರಿಂದ ಆರಂಭವಾಗಲಿದೆ. ಉಭಯ ತಂಡಗಳು ಮೊದಲ ಟ್ವೆಂಟಿ-20 ಪಂದ್ಯವನ್ನಾಡಲು ಕಟಕ್‌ಗೆ ತೆರಳಲಿವೆ. ಎರಡು ಹಾಗೂ 3ನೆ ಪಂದ್ಯ ಕ್ರಮವಾಗಿ ಇಂದೋರ್ ಹಾಗೂ ಮುಂಬೈನಲ್ಲಿ ನಡೆಯಲಿವೆ.
ಭಾರತ-ಶ್ರೀಲಂಕಾ ಸರಣಿ ವೇಳಾಪಟ್ಟಿ
►ಭಾರತ-ಶ್ರೀಲಂಕಾ ಮೊದಲ ಟೆಸ್ಟ್
ನವೆಂಬರ್ 16-20, ಕೋಲ್ಕತಾ
►ಭಾರತ-ಶ್ರೀಲಂಕಾ 2ನೆ ಟೆಸ್ಟ್
ನ.24-28, ನಾಗ್ಪುರ
►ಭಾರತ-ಶ್ರೀಲಂಕಾ 3ನೆ ಟೆಸ್ಟ್
ಡಿ.2-6, ಹೊಸದಿಲ್ಲಿ
►ಭಾರತ-ಶ್ರೀಲಂಕಾ: ಮೊದಲ ಏಕದಿನ
ಡಿ.10, ಧರ್ಮಶಾಲಾ
►ಭಾರತ-ಶ್ರೀಲಂಕಾ: 2ನೆ ಏಕದಿನ
ಡಿ.13, ಮೊಹಾಲಿ
►ಭಾರತ-ಶ್ರೀಲಂಕಾ: 3ನೆ ಏಕದಿನ
ಡಿ.17, ವಿಶಾಖಪಟ್ಟಣ
►ಭಾರತ-ಶ್ರೀಲಂಕಾ: ಮೊದಲ ಟ್ವೆಂಟಿ-20
ಡಿ.20, ಕಟಕ್
►ಭಾರತ-ಶ್ರೀಲಂಕಾ: 2ನೆ ಟ್ವೆಂಟಿ-20
ಡಿ.22, ಇಂದೋರ್
►ಭಾರತ-ಶ್ರೀಲಂಕಾ: 3ನೆ ಟ್ವೆಂಟಿ-20
ಡಿ.24, ಮುಂಬೈ.







