ಸೆಲ್ಫಿ ತೆಗೆಯಲು ಹೋಗಿ ರೈಲಿನಡಿಗೆ ಬಿದ್ದು ಮೂವರು ಮೃತ್ಯು

ರಾಮನಗರ, ಅ.3: ಚಲಿಸುತ್ತಿದ್ದ ರೈಲಿನ ಬಳಿ ಸೆಲ್ಫಿ ತೆಗೆಯಲು ಹೋಗಿ ರೈಲಿನಡಿಗೆ ಬಿದ್ದು ಮೂವರು ಯುವಕರು ಮೃತಪಟ್ಟ ಘಟನೆ ಬೆಂಗಳೂರು-ಬಿಡದಿ ಬಳಿಯ ವಂಡರ್ ಲಾ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.
ಸೇತುವೆ ಮೇಲೆ ಬೈಕ್‌ನಲ್ಲಿ ಹೋಗುತ್ತಿದ್ದ ಮೂವರು ಯುವಕರು ಕೆಳಭಾಗದಲ್ಲಿ ರೈಲು ಹೋಗುತ್ತಿದ್ದುದನ್ನು ಗಮನಿಸಿ ಸೆಲ್ಫಿ ತೆಗೆಯಲು ರೈಲು ಹಳಿ ಬಳಿ ಬಂದಿದ್ದಾರೆ. ಈ ವೇಳೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ರೈಲಿನಡಿಗೆ ಆಕಸ್ಮಿಕವಾಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದಾರೆ ಎಂದು ತಿಳಿದು ಬಂದಿದೆ.
ರೈಲು ಢಿಕ್ಕಿ ಹೊಡೆದ ರಭಸಕ್ಕೆ ದೇಹಗಳು ತುಂಡಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಮೃತ ಮೂವರನ್ನು 22ರಿಂದ 23 ವರ್ಷ ವಯಸ್ಸಿನ ಯುವಕರಾಗಿದ್ದು, ವಿದ್ಯಾರ್ಥಿಗಳು ಎನ್ನಲಾಗಿದೆ.
ಬೆಂಗಳೂರಿನ ವಂಡರ್‌ಲಾಗೆ ಪ್ರವಾಸಕ್ಕೆ ಬಂದಿದ್ದರೆನ್ನಲಾಗಿದ್ದು, ಸ್ಥಳಕ್ಕೆ ಬಿಡದಿ ಪೊಲೀಸರು ಹಾಗೂ ಚನ್ನಪಟ್ಟಣ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





