ಗುಜರಾತ್: ಬಿಜೆಪಿ ಕೌನ್ಸಿಲರ್ ನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಜನರು
ಸ್ಲಮ್ ನಲ್ಲಿದ್ದ ಮನೆಗಳ ತೆರವಿಗೆ ಆಕ್ರೋಶ

ವಡೋದರ, ಅ.3: ತಮ್ಮ ಸ್ಲಮ್ ತೆರವುಗೊಳಿಸಿದ ಆಕ್ರೋಶದಲ್ಲಿ ಜನರು ಬಿಜೆಪಿ ಕೌನ್ಸಿಲರ್ ಒಬ್ಬರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಇಂದು ವಡೋದರದಲ್ಲಿ ನಡೆದಿದೆ.
ವಡೋದರದ ಕೌನ್ಸಿಲರ್ ಹಸ್ಮುಖ್ ಪಟೇಲ್ ಎಂಬವರನ್ನು ಮರಕ್ಕೆ ಕಟ್ಟಿಹಾಕಿದ ಜನರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 30 ಜನರನ್ನು ಬಂಧಿಸಲಾಗಿದೆ.
ನೋಟಿಸ್ ನೀಡದೆ ಸ್ಥಳೀಯಾಡಳಿತ ಸ್ಲಮ್ ನಲ್ಲಿದ್ದ ತಮ್ಮ ಮನೆಗಳನ್ನು ತೆರವುಗೊಳಿಸಿದೆ ಎಂದು ಹಲ್ಲೆ ನಡೆಸಿದವರು ಆರೋಪಿಸಿದ್ದಾರೆ. ಈ ಸಂಬಂಧ ಕೆಲ ಸ್ಥಳೀಯರು ವಡೋದರ ಮುನಿಸಿಪಲ್ ಕಮಿಷನರ್ ಕಚೇರಿಗೆ ತೆರಳಿತ್ತು. “ನಿಮ್ಮ ಸ್ಥಳೀಯ ಕೌನ್ಸಿಲರ್ ಪಟೇಲ್ ಗೆ ನೋಟಿಸ್ ಕಳುಹಿಸಿದ್ದೇವೆ” ಎಂದು ಅಧಿಕಾರಿಗಳು ತಿಳಿಸಿದ್ದರು.
ಇದರಿಂದ ಕೋಪಗೊಂಡ ಗುಂಪು ಕೌನ್ಸಿಲರ್ ಪಟೇಲ್ ರನ್ನು ಈ ಬಗ್ಗೆ ಪ್ರಶ್ನಿಸಿದ್ದು, ನೋಟಿಸ್ ಸಿಕ್ಕಿಲ್ಲ ಎಂದವರು ಹೇಳಿದ್ದಾರೆ. ಆದರೆ ಇದಕ್ಕೆ ಕಿವಿಗೊಡದ ಜನರು ಅವರನ್ನು ಎಳೆದುಕೊಂಡು ಬಂದು ಮರಕ್ಕೆ ಕಟ್ಟಿ ಹಾಕಿದ್ದಾರೆ. ನಂತರ ಅವರಿಗೆ ಥಳಿಸಿದ್ದಾರೆ ಎನ್ನಲಾಗಿದೆ.
Next Story





