ಉಡುಪಿ: ಬೃಹತ್ ಸ್ವಚ್ಚತಾ ಅಭಿಯಾನ

ಉಡುಪಿ, ಅ.3: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಅಂಗವಾಗಿ ಉಡುಪಿಯ ಲೋಂಬಾರ್ಡ್ ಸ್ಮಾರಕ ಆಸ್ಪತ್ರೆ (ಮಿಶನ್), ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಮತ್ತು ರೋಟರಿ ಕ್ಲಬ್ ಉಡುಪಿ ಇವರ ವತಿಯಿಂದ ಬೃಹತ್ ಸ್ವಚ್ಚತಾ ಅಭಿಯಾನ ಮತ್ತು ಗಿಡ ನೆಡುವ ಕಾರ್ಯಕ್ರಮ ಆಸ್ಪತ್ರೆಯ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುಶೀಲ್ ಜತ್ತನ್ ಗಿಡ ಪಡೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನರಲ್ಲಿ ಸ್ವಚ್ಚತೆಯ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಪ್ರತಿದಿನ ಕಾರ್ಯಕ್ರಮವಾಗಬೇಕು. ನಮ್ಮ ಮನೆಯ ವಠಾರವನ್ನು ಸ್ವಚ್ಚ ಮಾಡಿದರೆ ದೇಶದಲ್ಲಿ ಬದಲಾವಣೆ ತರಲು ಸಾದ್ಯ ಎಂದರು.
ಕಾರ್ಯಕ್ರಮದಲ್ಲಿ ರೋಟರಿಯ ಮಾಜಿ ಅದ್ಯಕ್ಷ ವಲಯ ಸಂಯೋಜಕ ಡಾ.ಸುರೇಶ್ ಶೆಣೈ, ಬಡಗಬೆಟ್ಟು ಸಹಕಾರ ಸಂಘದ ಜಿಎಂ ಜಯಕರ ಶೆಟ್ಟಿ ಇಂದ್ರಾಳಿ, ಡಾ. ಪ್ರೇಮ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಗಣೇಶ್ ಕಾಮತ್, ನಮ್ಮ ಮನೆ ನಮ್ಮ ಮರ ತಂಡದ ರವಿರಾಜ್ ಹೆಚ್.ಪಿ, ರೋಟರಿ ಅದ್ಯಕ್ಷ ರಾಮಚಂದ್ರ ಉಪಾಧ್ಯಾಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಕಾರಂತ್, ಡಾ.ದೀಪಕ್ ಭಾಗವಹಿಸಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





