ಸುನ್ನೀ ಸಂದೇಶ ಚಂದಾ ಅಭಿಯಾನಕ್ಕೆ ಪಾಣಕ್ಕಾಡ್ ತಂಙಳ್‌ರಿಂದ ಚಾಲನೆ

ಮಂಗಳೂರು, ಅ. 3: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯು 16 ವರ್ಷಗಳಿಂದ ಪ್ರತೀ ತಿಂಗಳು ಹೊರತರುತ್ತಿರುವ ಸುನ್ನೀಸಂದೇಶ ಮಾಸ ಪತ್ರಿಕೆಯ 16ನೇ ವರ್ಷದ ಚಂದಾ ಅಭಿಯಾನಕ್ಕೆ ಮಂಗಳವಾರ ಮಲಪ್ಪುರಂ ಪಾಣಕ್ಕಾಡ್‌ನ ಶಿಹಾಬ್ ತಂಙಳ್‌ರವರ ಮನೆಯಲ್ಲಿ ಸಮಸ್ತ ಉಪಾಧ್ಯಕ್ಷ ಪಾಣಕ್ಕಾಡ್ ಸೈಯ್ಯದ್ ಹೈದರಲಿ ಶಿಹಾಬ್ ತಂಙಳ್ ಅವರು ಶಾಸಕ ಇಬ್ರಾಹೀಂ ಕುಂಞಿ ಅವರಿಗೆ ಚಂದಾ ಅಭಿಯಾನ ಕೂಪನ್ ನೀಡಿ ಚಾಲನೆ ನೀಡಿದರು.
ಸಮಾರಂಭದಲ್ಲಿ ಸಾದಿಕಲಿ ಶಿಹಾಬ್ ತಂಙಳ್, ಅಬ್ಬಾಸ್ ಅಲಿ ಶಿಹಾಬ್ ತಂಙಳ್, ಎಸ್‌ಕೆಎಸ್‌ಎಸ್‌ಎಫ್ ಕೇಂದ್ರೀಯ ಅಧ್ಯಕ್ಷ ಹಮೀದ್ ಅಲಿ ಶಿಹಾಬ್ ತಂಙಳ್, ಸುನ್ನೀ ಸಂದೇಶ ಪ್ರಧಾನ ಸಂಪಾದಕ ಹಾಜಿ ಕೆ.ಎಸ್. ಹೈದರ್ ದಾರಿಮಿ, ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರು, ಅಬ್ದುಲ್ ಸಮದ್ ಅರಳ, ಅಬ್ದುಲ್ಲಾ ಹಾಜಿ ಕಕ್ಕಾಡ್, ಅಮೀನ್ ಕಕ್ಕಾಡ್, ಎ. ಎಂ. ಅಲ ಮೇಲ್ಮುರಿ, ಫಕ್ರುದ್ದೀನ್, ಮುಜೀಬುರ್ರಹ್ಮಾನ್, ಫೈಸಲ್ ಬಾಪಕಿ ತಂಙಳ್, ತಾಜುದ್ದೀನ್, ಬದ್ರುದ್ದೀನ್ ಮೊದಲಾದವರು ಉಪಸ್ಥಿತರಿದ್ದರು ಎಂದು ಮುಸ್ತಫಾ ಫೈಝಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





