ಸಿಲಿಂಡರ್ ಸ್ಫೋಟ: ಗ್ಯಾರೇಜ್ ಮೇಲ್ಛಾವಣಿಗೆ ಹಾನಿ

ಕೊಣಾಜೆ, ಅ. 3: ಅಸೈಗೋಳಿಯಲ್ಲಿರುವ ಗ್ಯಾರೇಜೊಂದರಲ್ಲಿ ಅನಿಲ ಸಿಲಿಂಡರ್ ಸ್ಫೋಟಗೊಂಡ ಘಟನೆ ಮಂಗಳವಾರ ನಡೆದಿದ್ದು, ಕಾರ್ಮಿಕರು ಅಪಾಯ ದಿಂದ ಪಾರಾಗಿದ್ದಾರೆ.
ಅಸೈಗೋಳಿಯಲ್ಲಿರುವ ಗ್ಯಾರೇಜ್‌ನಲ್ಲಿ ಬೆಳಗ್ಗೆ ಗ್ಯಾಸ್ ವೆಲ್ಡ್ ಮಾಡುವ ಸಿಲಿಂಡರ್ ಸ್ಫೋಟಿಸಿದೆ. ಗ್ಯಾರೇಜ್‌ನಲ್ಲಿ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಘಟನೆ ನಡೆಯುತ್ತಿದ್ದ ಕೆಲವೇ ಕ್ಷಣದ ಮೊದಲು ಅದೇ ಸಿಲಿಂಡರ್ ಬಳಸಿ ಗ್ಯಾಸ್ ವೆಲ್ಡ್ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಚಹಾ ಕುಡಿಯಲೆಂದು ಹೊರಗಡೆ ತೆರಳಿದ್ದರು ಎನ್ನಲಾಗಿದೆ. ಉಳಿದ ಕಾರ್ಮಿಕರು ಒಂದಷ್ಟು ದೂರದಲ್ಲಿದ್ದು ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಸಿಲಿಂಡರ್ ಸ್ಫೋಟಿಸಿದ್ದು, ರಭಸಕ್ಕೆ ಮೇಲ್ಛಾವಣಿ ಕುಸಿದು ಹಾನಿಯಾಗಿದೆ. ಸ್ಫೋಟಗೊಂಡ ಯಂತ್ರ ಮೊದಲೇ ಬಿರುಕು ಬಿಟ್ಟಿದ್ದು ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
Next Story





