ದೈವಸ್ಥಾನಕ್ಕೆ ನುಗ್ಗಿ ಸೊತ್ತು ಕಳವು
ಕಾಪು, ಅ.3: ಕಟಪಾಡಿಯ ಏಣಗುಡ್ಡೆ ದುರ್ಗಾನಗರದಲ್ಲಿರುವ ಶ್ರೀನೀಚ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತು ಗಳನ್ನು ಕಳವು ಮಾಡಿದ್ದಾರೆ.
ದೈವಸ್ಥಾನದ ಮುಖ್ಯದ್ವಾರದ ಹಾಗೂ ಗರ್ಭಗುಡಿಗೆ ಹಾಕಿದ ಬೀಗ ಮುರಿದು ಒಳನುಗ್ಗಿದ ಕಳ್ಳರು ನೀಚದೈವದ ಕಂಚಿನ ಮೂರ್ತಿ, ಕಂಚಿನ ಪ್ರಭಾವಳಿ, ಅದಕ್ಕೆ ಅಳವಡಿಸಿದ ಬೆಳ್ಳಿಯ ಹೊದಿಕೆ, ಬೆಳ್ಳಿಯ ಗಿಂಡೆ, ಕಬ್ಬಿಣದ ಕೋಲಿಗೆ ಅಳವಡಿಸಿದ ಬೆಳ್ಳಿಯ ಹೊದಿಕೆ ಮತ್ತು ಗರ್ಭಗುಡಿಯ ಮರದ ದಾರಂದಕ್ಕೆ ಅಳವಡಿಸಿದ ಬೆಳ್ಳಿಯ ಹೊದಿಕೆಯನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ವೌಲ್ಯ 24,500 ರೂ. ಎಂದು ಅಂದಾಜಿ ಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





