ವಿದ್ಯುತ್ ಶಾಕ್‌ನಿಂದ ಮೃತ್ಯು
ಬೈಂದೂರು, ಅ.3: ಅಡಿಕೆಯನ್ನು ಕೊಯ್ಯುತ್ತಿದ್ದಾಗ ಕೊಕ್ಕೆ ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ 9:30ರ ಸುಮಾರಿಗೆ ಕಾಲ್ತೋಡು ಗ್ರಾಮದ ಮುಳುವಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಮುಳುವಾಡಿಯ ರಾಜು ಶೆಟ್ಟಿ(55) ಎಂದು ಗುರುತಿಸಲಾಗಿದೆ. ಇವರು ಅಡಿಕೆ ತೋಟದಲ್ಲಿ ಕೊಕ್ಕೆಯಿಂದ ಅಡಿಕೆಯನ್ನು ಕೊಯ್ಯುತ್ತಿರುವಾಗ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ಕೊಕ್ಕೆ ತಗಲಿತೆನ್ನಲಾಗಿದೆ. ಇದರಿಂದ ಕೊಕ್ಕೆಯಲ್ಲಿ ವಿದ್ಯುತ್ ಹರಿದು ಶಾಕ್‌ನಿಂದ ರಾಜು ಶೆಟ್ಟಿ ಕುಸಿದು ಬಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಅವರು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





