ದಾವಣಗೆರೆ: ವಾಲ್ಮೀಕಿ ಜಯಂತಿ ಅಂಗವಾಗಿ ಬೈಕ್ ರ್ಯಾಲಿ

ದಾವಣಗೆರೆ, ಅ.3: ವಾಲ್ಮೀಕಿ ನಾಯಕ ಯುವ ಘಟಕದಿಂದ ಮಹರ್ಷಿವಾಲ್ಮೀಕಿ ಜಯಂತಿ ಅಂಗವಾಗಿ ನಗರದಲ್ಲಿ ಮಂಗಳವಾರ 3ನೆ ವರ್ಷದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಇಲ್ಲಿನ ವೀರ ಮದಕರಿ ನಾಯಕ ವೃತ್ತದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ನಾಯಕ ಸಮಾಜ ಸಂಘಟನೆ ಸದುದ್ದೇಶದೊಂದಿಗೆ ಸರಕಾರದಿಂದ ಸಮಾಜಕ್ಕೆ ಸಿಗಬೇಕಾದ ಸೂಕ್ತ ಸ್ಥಾನಮಾನವನ್ನು ಸಮಾಜಕ್ಕೆ ದೊರಕಿಸಿ ಕೊಡಲು ನಾಯಕ ಯುವ ಸಮೂಹವು ಸಮಾಜದ ಧ್ವನಿಯಾಗಲಿ ಎಂದರು.
ಸಮಾಜದ ಯುವ ಮುಖಂಡ ಆರ್. ಲಕ್ಷ್ಮಣ ಮಾತನಾಡಿ, ನಾಯಕ ಸಮಾಜಕ್ಕೆ ಶೇ.3ರಷ್ಟಿರುವ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕು. ಮದಕರಿ ನಾಯಕರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಸ್ಮಾರಕ, ಆಸ್ತಿಪಾಸ್ತಿ ಒತ್ತುವರಿಯಾಗಿದ್ದು, ಅವುಗಳನ್ನು ತೆರವು ಮಾಡುವ ಮೂಲಕ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು. ದೂಡಾ ಸದಸ್ಯ, ಸಮಾಜದ ಯುವ ಮುಖಂಡ ವಿನಾಯಕ ಪೈಲ್ವಾನ್ ಮಾತನಾಡಿದರು.
Next Story





