ಹನೂರು: ಬಿಜೆಪಿಯ ನೂತನ ಕಚೇರಿಯ ಉದ್ಘಾಟನೆ

ಹನೂರು, ಅ.3: ಹನೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಅಪೇಕ್ಷಿತರು ಹೆಚ್ಚಾಗಿದ್ದಾರೆ, ಆದರೆ ಅಂತಿಮ ತಿರ್ಮಾನವನ್ನು ವರಿಷ್ಠರು, ವಿಸ್ತಾರಕರು ಹಾಗೂ ಚುನಾವಣೆ ಉಸ್ತುವಾರಿಗಳ ಹಾಗೂ ಮತದಾರರ ಅಭಿಪ್ರಾಯ ಸಂಗ್ರಹಿಸಿ ಟಿಕೇಟ್ ನೀಡಲಿದ್ದಾರೆ, ಟಿಕೆಟ್ ನೀಡುವಲ್ಲಿ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರ ತಿರ್ಮಾನವೇ ಅಂತಿಮವಾಗಿರುತ್ತದೆ ಜಿಲ್ಲಾಧ್ಯಕ್ಷ ಪ್ರೋ. ಮಲ್ಲಿಕಾರ್ಜುನಪ್ಪ ತಿಳಿಸಿದರು.
ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದ ಸಮೀಪ ಬಿಜೆಪಿಯ ನೂತನ ಕಚೇರಿಯ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಗೆ ಉಸ್ತುವಾರಿಯಾಗಿ ಸೋಮಣ್ಣ ನೀಡಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ವರಿಷ್ಠರು ತಿಳಿಸಿದ್ದಾರೆ. ಅದರಂತೆ ಹನೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಅಪೇಕ್ಷಿತರು ಹೆಚ್ಚಾಗಿದ್ದಾರೆ. ಆದರೆ ಅಂತಿಮ ತಿರ್ಮಾನವನ್ನು ವರಿಷ್ಠರು ಅಭಿಪ್ರಾಯ ಸಂಗ್ರಹಿಸಿ ಟಿಕೇಟ್ ನೀಡಲಿದ್ದಾರೆ. ಮುಂದಿನ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಮಿಷನ್ 150 ಅಭ್ಯರ್ಥಿಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಸಮೀಪಿಸುತ್ತಿರುವುದರಿಂದ ಎಲ್ಲಾ ಕಾರ್ಯಕರ್ತರು ಪಕ್ಷ ಸಂಘಟನೆ ಕಡೆಗೆ ಗಮನ ಕೂಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಮುಂದಿನ ದಿನಗಳಲ್ಲಿ ಪಕ್ಷದ ಎಲ್ಲಾ ಮುಖಂಡರನ್ನು ಸರಿದೋಗಿಸಿಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಪರಿಮಳನಾಗಪ್ಪ, ಅಧ್ಯಕ್ಷ ರಾಜಶೇಖರ್, ರಾಜೂಗೌಡ, ಪೊನ್ನಾಚಿ ಮಹಾದೇವಸ್ವಾಮಿ, ಬಿ.ಕೆ ಶಿವಕುಮಾರ್, ಮಂಡಲ ಹನೂರು ಘಟಕದ ಯುವ ಮೋರ್ಚ ಅಧ್ಯಕ್ಷ ವೃಷಬೇಂದ್ರಸ್ವಾಮಿ, , ಇನ್ನಿತರರು ಇದ್ದರು.







