ರೊಹಿಂಗ್ಯಾ ನಿರಾಶ್ರಿತರಿಗೆ 2,826 ಕೋಟಿ ರೂ. ನೆರವು ಅಗತ್ಯ: ನೆರವು ಸಂಘಟನೆಗಳು

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಅ. 4: ಬಾಂಗ್ಲಾದೇಶದಲ್ಲಿ ಜೀವ ಉಳಿಸುವ ನೆರವಿನ ಅಗತ್ಯದಲ್ಲಿರುವ 8.09 ಲಕ್ಷ ರೊಹಿಂಗ್ಯಾ ಮುಸ್ಲಿಮರಿಗೆ ನೆರವಾಗಲು ಮುಂದಿನ ಆರು ತಿಂಗಳಲ್ಲಿ 434 ಮಿಲಿಯ ಡಾಲರ್ (ಸುಮಾರು 2,826 ಕೋಟಿ ರೂಪಾಯಿ) ಅಗತ್ಯವಿದೆ ಎಂದು ಮಾನವೀಯ ನೆರವು ಸಂಘಟನೆಗಳು ಬುಧವಾರ ಹೇಳಿವೆ.
ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಆಗಸ್ಟ್ 25ರಂದು ಹೊಸದಾಗಿ ಹಿಂಸಾಚಾರ ಆರಂಭಗೊಂಡ ಬಳಿಕ, ಸೇನೆಯ ದೌರ್ಜನ್ಯಕ್ಕೆ ಬೆದರಿ ಸುಮಾರು 5 ಲಕ್ಷ ರೊಹಿಂಗ್ಯ ಮುಸ್ಲಿಮರು ಪಕ್ಕದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಸುಮಾರು 3 ಲಕ್ಷ ರೊಹಿಂಗ್ಯರು ಅದಕ್ಕೂ ಮೊದಲೇ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದಾರೆ.
Next Story





