ಬಾವಿಗೆ ಬಿದ್ದು ಮೃತ್ಯು
ಕೋಟ, ಅ.5: ಮನೆಯ ಬಾವಿಯ ದಂಡೆಯ ಮೇಲೆ ಕುಳಿತು ಮದ್ಯಪಾನ ಮಾಡುತಿದ್ದ ವ್ಯಕ್ತಿಯೊಬ್ಬರು ಮದ್ಯದ ಅಮಲಿನಲ್ಲಿ ಅಕಸ್ಮಿಕವಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೊಳಹಳ್ಳಿ ಗ್ರಾಮದ ಕೋಣೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಉದಯ ಮರಕಾಲ (43) ಎಂಬವರು ಮೃತಪಟ್ಟವರು. ನಾಲ್ಕು ವರ್ಷಗಳ ಹಿಂದೆ ಹೆಂಡತಿ ತೀರಿಕೊಂಡ ಬಳಿಕ ವಿಪರೀತ ನೊಂದು ಜೀವನದಲ್ಲಿ ಜಿಗುಪ್ಸೆ ಗೊಂಡ ಉದಯ, ಮದ್ಯ ಸೇವನೆಯ ಚಟ ಹೊಂದಿದ್ದರು. ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ಬಾವಿಯ ದಂಡೆ ಮೇಲೆ ಕುಳಿತು ಮದ್ಯಪಾನ ಮಾಡು ತಿದ್ದಾಗ ಈ ಘಟನೆ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೋಟ ಪೊಲೀಸರು ತಿಳಿಸಿದ್ದಾರೆ.
Next Story





