13 ಕೋಟಿ ವೆಚ್ಚದಲ್ಲಿ ಸಾಲು ಮರದ ತಿಮಕ್ಕ ಉದ್ಯಾನವನ ಅಭಿವೃದ್ಧಿ
ಬಾಗಲಕೋಟೆ, ಅ.5: ಜಮಖಂಡಿ ಪಟ್ಟಣದ ಹೊರವಲಯದಲ್ಲಿ ಸುಮಾರು 13 ಕೋಟಿ ರೂ.ವೆಚ್ಚದಲ್ಲಿ ಸಾಲು ಮರದ ತಿಮ್ಮಕ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ.
ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಮೂಲಕ ಶಾಸಕ ಸಿದ್ದು ನ್ಯಾಮಗೌಡರ ಆಸಕ್ತಿಯಿಂದ ಈ ಉದ್ಯಾನವನ ಮೈದೆಳೆದಿದ್ದು, ಜನರನ್ನು ಆಕರ್ಷಿಸುತ್ತಿದೆ. ಈ ಉದ್ಯಾನವನಲ್ಲಿ ಕಟ್ಟೆಯ ಮೇಲೆ ಕುಳಿತುಕೊಂಡು ಹರಟೆ ಹೊಡೆಯುತ್ತಿರುವ ಈ ವ್ಯಕ್ತಿಗಳು, ಸಮಗಾರರು, ಬಡಿಗರು, ನೇಕಾರರು, ಚಮ್ಮಾರರು, ಲಂಬಾಣಿ, ಮೀನುಗಾರರು, ಕುಂಬಾರರು, ಶೆಟ್ಟರು, ಗೌಡರ ಮನೆ, ಅಜ್ಜಿ ಮನೆ ಸೇರಿದಂತೆ ಕಿರಾಣಿ ಅಂಗಡಿಗಳು, ದೇವಸ್ಥಾನ, ಗ್ರಾಮೀಣ ಭಾಗದಲ್ಲಿ ಹರಟೆ ಕಟ್ಟಿ ಹಾಗೂ ಕುಸ್ತಿ ಆಡುವ ಗರಡಿ ಮನೆ, ಗಾಣಿಗ ಮನೆ ಸೇರಿದಂತೆ ನೀರ ತರುವ ಬಾವಿ ಹೇಗೆ ಇರುತ್ತಿದ್ದವು. ಜುಳು-ಜುಳು ನೀರು ಯಾವ ರೀತಿಯಾಗಿ ಹರಿಯುತ್ತಿದ್ದವು ಹಾಗೇ ಪ್ರತಿಯೊಂದನ್ನು ಬಿಂಬಿಸುವ ಮೂರ್ತಿಗಳ ಸೃಷ್ಟಿ ಮಾಡಿದ್ದಾರೆ. ಇಲ್ಲಿಗೆ ಬಂದು ನೋಡಿದರೆ, ಹಿರಿಯರಿಗೆ ತಮ್ಮ ಹಿಂದಿನ ಕಾಲವನ್ನು ನನೆಸುವಂತಾಗುತ್ತದೆ.
ಇದರ ಜೊತೆಗೆ ಕೆರೆಯನ್ನು ನಿರ್ಮಾಣಮಾಡಿ, ಬೋಟಿಂಗ್ ವ್ಯವಸ್ಥೆ ಹಾಗೂ ಮ್ಕಕಳ ಉದ್ಯಾನವನ ಸೇರಿದಂತೆ ಎಲ್ಲವನ್ನು ಅಭಿವೃದ್ಧಿ ಮಾಡುವ ಮೂಲಕ ಉತ್ತರ ಕರ್ನಾಟಕದಲ್ಲಿಯೇ ಏಕೈಕ ಉದ್ಯಾನವನ ಮಾಡುವ ಗುರಿ ಹೊಂದಲಾಗಿದೆ.





