ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಪ್ರಕರಣ: ಮಧ್ಯವರ್ತಿ ಕಾರ್ಲೋಸ್ ಜೆರೋಸಾ ವಶಕ್ಕೆ

ಹೊಸದಿಲ್ಲಿ, ಅ. 2: ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಕೋರಿಕೆ ಮೇರೆಗೆ ಜಾರಿಗೊಳಿಸಲಾದ ಇಂಟರ್‌ಪೋಲ್ ನೋಟಿಸ್ ಅನುಸರಿಸಿ ಇಟಲಿಯಲ್ಲಿ ಅಧಿಕಾರಿಗಳು ಯುರೋಪಿಯನ್ ಮಧ್ಯವರ್ತಿ ಕಾರ್ಲೋಸ್ ಜೆರೋಸಾ ಅವರನ್ನು ಬಂಧಿಸಿದ್ದಾರೆ.
ರಾಜತಾಂತ್ರಿಕ ಕ್ರಮದ ಮೂಲಕ ಅವರನ್ನು ಶೀಘ್ರದಲ್ಲಿ ಭಾರತಕ್ಕೆ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳ ಮೂಲಗಳು ತಿಳಿಸಿವೆ.
ಅವರನ್ನು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ರಶ್ಯ ಪೊಲೀಸರು ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಗಡಿಪಾರು ಕೋರಿಕೆ ಸಲ್ಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ವಿಝರ್‌ಲ್ಯಾಂಡ್‌ನಿಂದ ಇಟಲಿಗೆ ಆಗಮಿಸುತ್ತಿರುವಾಗ ಗೆರೋಸಾ ಅವರನ್ನು ವಶಕ್ಕೆ ಪಡೆಯ ಲಾಯಿತು ಎಂದು ಅವರು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಈ ಪ್ರಕರಣ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





