ವಾಪಸಾದ ಅಫ್ಘಾನ್ ನಿರಾಶ್ರಿತರಿಗೆ ಸಂಕಷ್ಟ: ಆ್ಯಮ್ನೆಸ್ಟಿ

ಕಾಬೂಲ್, ಅ. 5: ಯುರೋಪ್‌ನಿಂದ ‘ಬಲವಂತವಾಗಿ’ ಹಿಂದಕ್ಕೆ ಕಳುಹಿಸಲ್ಪಟ್ಟ ಅಫ್ಘಾನಿಸ್ತಾನ್ ನಿರಾಶ್ರಿತರು ಈಗ ಸ್ವದೇಶದಲ್ಲಿ ಹಿಂಸೆ, ಅಪಹರಣ ಮತ್ತು ಹತ್ಯೆ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಗುರುವಾರ ಹೇಳಿದೆ.
2016ರಲ್ಲಿ ಸುಮಾರು 9,500 ಅಫ್ಘಾನಿಸ್ತಾನೀಯರ ಆಶ್ರಯ ಅರ್ಜಿಗಳು ತಿರಸ್ಕರಿಸಲ್ಪಟ್ಟ ಬಳಿಕ, ಅವರು ತಮ್ಮ ದೇಶಕ್ಕೆ ಮರಳಿದ್ದರು. ಅದಕ್ಕೂ ಮುಂದಿನ ವರ್ಷ ಸುಮಾರು 3,300 ಮಂದಿಯನ್ನು ಅಫ್ಘಾನಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿತ್ತು.
Next Story





