2019 ಮಾರ್ಚ್ ಒಳಗೆ ಎಲ್ಲ ಬೋಧಕರಿಗೂ ತರಬೇತಿ: ಕೇಂದ್ರ ಸಚಿವ ಕುಶ್ವಾಹ

ಪಾಟ್ನಾ, ಅ. 2: ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ 2019 ಮಾರ್ಚ್ ಅಂತ್ಯದ ಒಳಗೆ ತರಬೇತಿ ಪಡೆಯದ ಎಲ್ಲ ಬೋಧಕರು ತರಬೇತಿ ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಇಂದು ತಿಳಿಸಿದ್ದಾರೆ.
ಖಾಸಗಿ ಹಾಗೂ ಸರಕಾರಿ ಶಾಲೆಗಳ ಬೋಧಕರು ತರಬೇತು ಪಡೆಯದೇ ಇದ್ದರೆ, ಅವರ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಮಾನವ ಸಂಪನ್ಮೂಲಗಳ ಸಹಾಯಕ ಸಚಿವರು ತಿಳಿಸಿದ್ದಾರೆ.
ನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ತರಬೇತಿ ಪಡೆಯದ ಎಲ್ಲ ಬೋಧಕರು ತರಬೇತಿ ಪಡೆಯುವುದು ಕಡ್ಡಾಯ ಎಂಬ ನಿರ್ಧಾರವನ್ನು ಮಾನವ ಸಂಪನ್ಮೂಲ ಸಚಿವಾಲಯ ತೆಗೆದು ಕೊಂಡಿದೆ ಎಂದು ಕುಸ್ವಾಹ ಹೇಳಿದ್ದಾರೆ.
ತರಬೇತಿ ಪಡೆಯದ ಬೋಧಕರು ದೊಡ್ಡ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿರುವ ಅವರು, ಎನ್‌ಐಒಎಸ್ ಮೂಲಕ ಎಲ್ಲ ಬೋಧಕರು ತರಬೇತಿ ಪಡೆಯಲು ಅವಕಾಶ ನೀಡಲು ಸಂಸತ್ತಿನ ಕಳೆದ ಅಧಿವೇಶನದಲ್ಲಿ ಆರ್‌ಟಿಇ ಕಾಯ್ದೆಗೆ ಸರಕಾರ ತಿದ್ದುಪಡಿ ತರಲಾಗಿದೆ ಎಂದರು.
Next Story





