‘ಅಸ್ಪಶ್ಯತೆ ನಿವಾರಣೆ ಗಾಂಧಿ ತತ್ವದ ಅನಾವರಣ’

ಉಡುಪಿ, ಅ.5: ಬುಡಕಟ್ಟು ಜನಾಂಗದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಾಲ್ಯದಿಂದಲೇ ಪಾಲಿಸಿಕೊಂಡು ಬದುಕಿನಲ್ಲಿ ಎಲ್ಲರ ಪ್ರೀತಿಯೊಂದಿಗೆ ಇಂದು ನಾನು ನಿಮ್ಮಲ್ಲಿ ಒಬ್ಬನಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ ಎಂದು 102 ವರ್ಷದ ವಯೋವೃದ್ಧ ಜಾನಪದ ಡೋಲು ಕಲಾವಿದ ಗುಡ್ಡೆಯಂಗಡಿಯ ಗುರುವ ಹೇಳಿದ್ದಾರೆ.
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧೀಜಿ ಜಯಂತಿ ಪ್ರಯಕ್ತ ಹಮ್ಮಿಕೊಳ್ಳಲಾದ ಗಾಂಧೀ ವಿಚಾರಧಾರೆಗಳ ವಿಶೇಷ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಶತಾಯುಷಿ ಡೋಲು ವಾದಕ 102 ವರ್ಷದ ವಯೋವೃದ್ಧ ಗುಡ್ಡೆಯಂಗಡಿಯ ಗುರುವ ಅವರನ್ನು ಸನ್ಮಾನಿಸಿ, ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳೊಂದಿಗೆ ತನ್ನ ಬದುಕಿನ ಅನುಭವನ್ನು ಹಂಚಿಕೊಂಡರು. ಎಳೆಯರನ್ನು ನಾವು ತಿದ್ದಿತೀಡಬೇಕು ಎಂದವರು ಹೇಳಿದರು. ತಮ್ಮ 12ನೇ ವಯಸ್ಸಿನಲ್ಲಿ ಡೋಲು ಬಾರಿಸುವ ಕಲೆಯನ್ನು ಮೈಗೂಡಿಸಿಕೊಂಡ ಗುರುವ ಇಂದಿನ ಆಧುನೀಕರಣ ಯುಗದಲ್ಲಿ ಆರೋಗ್ಯದ ಬಗ್ಗೆ ವಹಿಸಬೇಕಾದ ಕಾಳಜಿಯನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಆರ್.ರಾಯ್ಕರ್ ಗಾಂಧಿ ವಿಚಾರಗಳ ಪ್ರಸ್ತುತತೆಯೊಂದಿಗೆ ಹಿರಿಯರಿಗೆ ಗೌರವ ಸಲ್ಲಿಸಿ, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನಿಕೇತನ ಗಾಂಧೀಜಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಸುಜಯಾ ಕೆ. ಎಸ್. ಪ್ರಾಸ್ತಾವಿಕ ಮಾತುಗಳೊಂದಿಗೆ ಸನ್ಮಾನಿತರನ್ನು ಪರಿಚಯಿಸಿದರು.
ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರವೀಣ ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧ್ಯಕ್ಷೆ ಜ್ಯೋತಿ ಕಾರ್ಯಕ್ರಮ ನಿರೂ ಪಿಸಿದರು. ರಾ.ಸೇ. ಯೋಜನೆ ವಿದ್ಯಾರ್ಥಿನಿಯರು ಗಾಂಧಿ ವಿಚಾರಧಾರೆ ಗಳನ್ನು ಹಾಡಿನ ಮೂಲಕ ಅಭಿವ್ಯಕ್ತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸವಿುತಿ ಕಾರ್ಯದರ್ಶಿ ಶ್ವೇತಾ ವಂದಿಸಿದರು.







