ಗಾಂಜಾ ಮಾರಾಟ ಯತ್ನ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಅ. 5: ನಗರದ ಕಾವೂರು-ಕೂಳೂರು ರಸ್ತೆಯ ಗುಡ್ಡೆ ಅಂಗಡಿ ಎಂಬಲ್ಲಿ ಗುರುವಾರ ಬೆಳಗ್ಗೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುಳಾಯಿ ದ್ವಾರಕನಗರ ನಿವಾಸಿ ಮಯ್ಯಿದ್ದಿ(31) ಮತ್ತು ತೊಕ್ಕೊಟ್ಟು ನಿವಾಸಿ ರತನ್ ಮೆಂಡನ್ (32) ಬಂಧಿತ ಆರೋಪಿಗಳು. ಆರೋಪಿಗಳಿಂದ 1ಕೆ.ಜಿ. 250 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಉರುಂದಾಡಿಗುಡ್ಡೆಯ ಸುರೇಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ ಗ್ರಾಹಕರಾದ ಇತರ ಏಳು ಮಂದಿಯನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳ ಬಳಿಯಿದ್ದ ಒಂದು ಪಿಕ್‌ಅಪ್ ವಾಹನ, ಒಂದು ಆ್ಯಕ್ಟಿವಾವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story





