ಭಾರತದ ಮೂವರು ಕಿರಿಯ ಗೋಲ್ ಕೀಪರ್ ಗಳ ಕಿರು ಪರಿಚಯ
ಹೊಸದಿಲ್ಲಿ, ಅ.5: ಭಾರತದ 17 ವರ್ಷದೊಳಗಿನ ಫುಟ್ಬಾಲ್ ತಂಡ ವಿಶ್ವಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಭಾರತದ ಜೂನಿಯರ್ ತಂಡದಲ್ಲಿರುವ ಮೂವರು ಗೋಲ್‌ಕೀಪರ್‌ಗಳ ಪರಿಚಯ ಇಲ್ಲಿದೆ. ►ಧೀರಜ್ ಸಿಂಗ್: ಇವರು ಭಾರತದ ಅತ್ಯಂತ ಅನುಭವಿ ಗೋಲ್‌ಕೀಪರ್. ಒಟ್ಟು 42 ಪಂದ್ಯಗಳನ್ನು ಆಡಿರುವ ಸಿಂಗ್ 2013ರಿಂದ ರಾಷ್ಟ್ರೀಯ ತಂಡದಲ್ಲಿದ್ದಾರೆ. 2013ರಲ್ಲಿ ಅಂಡರ್-16 ಸ್ಯಾಫ್ ಚಾಂಪಿಯನ್‌ಶಿಪ್‌ನ್ನು ಜಯಿಸಿದ್ದರು. ಕಳೆದ ವರ್ಷ ನಡೆದಿದ್ದ ಎಎಫ್‌ಸಿ ಅಂಡರ್-16 ಚಾಂಪಿಯನ್‌ಶಿಪ್‌ನಲ್ಲಿ ಎರಡು ಪಂದ್ಯಗಳಲ್ಲಿ 2 ಪೆನಾಲ್ಟಿಯನ್ನು ಉಳಿಸುವ ಮೂಲಕ ಚಿಲಿ ವಿರುದ್ಧ ಭಾರತ 1-1 ರಿಂದ ಡ್ರಾ ಸಾಧಿಸಲು ನೆರವಾಗಿದ್ದರು.
ಮಣಿಪುರದಲ್ಲಿ ಜನಿಸಿರುವ ಧೀರಜ್ ಸಿಂಗ್ ಫುಟ್ಬಾಲ್ ವೃತ್ತಿ ಆಯ್ದುಕೊಳ್ಳುವ ಮೊದಲು ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ಹೊಂದಿದ್ದರು.
►ಪ್ರಭ್‌ಸುಖನ್ ಗಿಲ್: ಪಂಜಾಬ್‌ನ ಗಿಲ್ ಸೆಂಟ್ರಲ್ ಡಿಫೆಂಡರ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ಇದೀಗ ಉತ್ತಮ ಗೋಲ್‌ಕೀಪರ್ ಆಗಿ ರೂಪುಗೊಂಡಿದ್ದಾರೆ. ಚಂಡಿಗಡ ಫುಟ್ಬಾಲ್ ಅಕಾಡಮಿಯಲ್ಲಿ ತರಬೇತಿ ಪಡೆದಿರುವ ಧೀರಜ್ ಪ್ರಸ್ತುತ ವಿಶ್ವಕಪ್‌ನಲ್ಲಿ ಭಾರತ ಆಡಲಿರುವ 3 ಗ್ರೂಪ್ ಪಂದ್ಯಗಳ ಪೈಕಿ ಒಂದರಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ. ►ಸನ್ನಿ ಧಲಿವಾಲ್: ಕೆನಡಾದಲ್ಲಿ ಜನಿಸಿರುವ ಸನ್ನಿ ಧಲಿವಾಲ್ ತಡವಾಗಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಭಾರತದ ದಂಪತಿಗೆ ಜನಿಸಿರುವ ಸನ್ನಿ ಭಾರತದ ಪಾಸ್‌ಪೋರ್ಟ್ ಹೊಂದಿಲ್ಲ. ಇದು ಅವರಿಗೆ ಸಮಸ್ಯೆಯಾಗಿ ಪರಿಗಣಮಿಸಿದೆ. ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್), ಕ್ರೀಡಾ ಸಚಿವಾಲಯ ಹಾಗೂ ಎಐಎಫ್‌ಎಫ್, ಟೊರೊಂಟೊ ಫುಟ್ಬಾಲ್ ಕ್ಲಬ್ ಅಕಾಡಮಿಯ ಪ್ರಯತ್ನದ ಫಲವಾಗಿ ಸನ್ನಿ ತನ್ನ ಕನಸು ಈಡೇರಿಸಿಕೊಂಡಿದ್ದಾರೆ.







