‘ಮೇಕ್ ಇನ್ ಇಂಡಿಯಾ’ ಅಂದರೆ?
ಮಾನ್ಯರೆ,
ಯಾಕೋ ಮೋದಿಯವರ ಮೇಕ್ ಇನ್ ಇಂಡಿಯಾ ನನ್ನಂತಹ ದಡ್ಡನಿಗೆ ಅರ್ಥವೇ ಆಗುತ್ತಿಲ್ಲ, ಮೋದಿಯ ಮೆಕ್ ಇನ್ ಇಂಡಿಯಾದ ಲೋಗೋ-ಮೇಡ್ ಇನ್ ಸ್ವಿಟ್ಝರ್ಲ್ಯಾಂಡ್, ಅವರ ಬುಲ್ಲೆಟ್ ಟ್ರೇನ್- ಮೇಡ್ ಇನ್ ಜಪಾನ್, ಅವರ ಸರ್ದಾರ್ ಪಟೇಲ್ ಮೂರ್ತಿ - ಮೇಡ್ ಇನ್ ಚೈನಾ, ಅವರ ಸ್ಮಾರ್ಟ್ ಸಿಟಿ-ಮೇಡ್ ಇನ್ ಸ್ವೀಡನ್, ಅವರ ಗುಂಡು ನಿರೋಧಕ ಕಾರು-ಮೇಡ್ ಇನ್ ಜರ್ಮನಿ, ಅವರ ಹತ್ತು ಲಕ್ಷದ ಸೂಟ್-ಬೂಟ್ - ಮೇಡ್ ಇನ್ ಇಂಗ್ಲೆಂಡ್, ಅವರ ಕಪ್ಪುಕನ್ನಡಕ ಬಲ್ಗಾರಿ- ಮೇಡ್ ಇನ್ ಇಟಲಿ, ಅವರ ಪೆನ್ ಮೊವಾಡೋ-ಮೇಡ್ ಇನ್ ಸ್ವಿಟ್ಝರ್ಲ್ಯಾಂಡ್, ಅವರ ಆಪ್ತಮಿತ್ರ ಅಂಬಾನಿಯ ಜಿಯೋ ಫೋನುಗಳು-ಮೇಡ್ ಇನ್ ಚೈನಾ, ಅವರ ಪ್ರಚಾರ ಕಂಪೆನಿ ಅಪ್ಕೋ-ಮೇಡ್ ಇನ್ ಅಮೆರಿಕ, ಅವರು ದಿನಾಲೂ ಹಾಲು ಕುಡಿಯುವ ಜರ್ಸಿ ದನ-ಮೇಡ್ ಇನ್ ಸ್ವೀಡನ್. ಅಷ್ಟೇ ಅಲ್ಲ ದೇವರ ಮೂರ್ತಿಯಿಂದ ಹಿಡಿದು ಸಣ್ಣ ದೀಪಾವಳಿ ಹಣತೆಯ ವರೆಗೆ ಪ್ರತಿಯೊಂದನ್ನೂ ಚೀನಾದಿಂದ ಆಮದು ಮಾಡುವ ಮಾರ್ವಾಡಿ ಮತ್ತು ಗುಜರಾತಿ ವ್ಯಾಪಾರಿಗಳೆಲ್ಲಾ ಇವರ ಪಕ್ಷದ ದೇಶಭಕ್ತ ಸದಸ್ಯರು. ವಾಸ್ತವ ಸ್ಥಿತಿ ಹೀಗಿರುವಾಗ ಮೋದಿ ಭಕ್ತರೇ ದಯಮಾಡಿ ನನ್ನಂತಹ ಶತ ದಡ್ಡನ ಮೇಲೆ ಕನಿಕರವಿಟ್ಟು ಸ್ವಲ್ಪಹೇಳಿ -‘ಮೇಕ್ ಇನ್ ಇಂಡಿಯಾ’ ಅಂದರೆ ಏನು?