ಬಿಜೆಪಿ ನಾಯಕನಿಗೆ ಪ್ರಶ್ನೆ ಕೇಳಿದ ಇಬ್ಬರ ಬಂಧನ

ಡಾರ್ಜಿಲಿಂಗ್, ಅ. 2: ಪಶ್ಚಿಮಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರಿಗೆ ಡಾರ್ಜಿಲಿಂಗ್‌ನಲ್ಲಿ ಪ್ರಶ್ನೆ ಕೇಳಿದ ಇಬ್ಬರು ವ್ಯಕ್ತಿಗಳನ್ನು ಶುಕ್ರವಾರ ಬಂಧಿಸಲಾಗಿದೆ.
ರಾಜ್ಯ ಬಿಜೆಪಿಯ ಮುಖ್ಯಸ್ಥ ದಿಲೀಪ್ ಘೋಷ್ ಗುರುವಾರ ಡಾರ್ಜಿಲಿಂಗ್‌ಗೆ ಭೇಟಿ ನೀಡಿದ ಸಂದರ್ಭ ಗುಂಪೊಂದು ಅವರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿತ್ತು. ಇದರಿಂದ ಪಕ್ಷದ ಸಭೆ ನಡೆಯುತ್ತಿರುವ ಪ್ರದೇಶ ಉದ್ವಿಗ್ನಗೊಂಡಿತ್ತು. ಅನಂತರ ಸಭೆ ರದ್ದುಗೊಳಿಸಲಾಗಿತ್ತು.
“ನಾವು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದೇವೆ. ಅವರ ವಿಚಾರಣೆ ನಡೆಸುತ್ತಿದ್ದೇವೆ. ಇತರ ಆರೋಪಿಗಳನ್ನು ಕೂಡಲೇ ಬಂಧಿಸಲಿದ್ದೇವೆ” ಎಂದು ಡಾರ್ಜಿಲಿಂಗ್‌ನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂರ್ಖಾ ಜನಮುಕ್ತಿ ಮೋರ್ಚಾದ ವರಿಷ್ಠ ಬಿಮಲ್ ಗುರುಂಗ್, ಬಿಜೆಪಿ ನಾಯಕರ ಮೇಲೆ ದಾಳಿ ನಡೆಸಿದವರನ್ನು ಕೂಡಲೇ ಬಂಧಿಸಬೇಕು. ಪ್ರತ್ಯೇಕ ಗೂರ್ಖಾ ಲ್ಯಾಂಡ್‌ಗೆ ವಿರೋಧವಾಗಿರುವವರು ಈ ದಾಳಿ ನಡೆಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
Next Story





