ಡೆನ್ಮಾರ್ಕ್‌ನಲ್ಲೂ ಬುರ್ಖಾ ನಿಷೇಧ

ಕೋಪನ್‌ಹೇಗನ್ (ಡೆನ್ಮಾರ್ಕ್), ಅ. 6: ನಿಕಾಬ್ ಅಥವಾ ಬುರ್ಖಾವನ್ನು ನಿಷೇಧಿಸಿರುವ ಐರೋಪ್ಯ ದೇಶಗಳ ಸಾಲಿಗೆ ಡೆನ್ಮಾರ್ಕ್ ಸೇರಲಿದೆ.
ಈ ಪ್ರಸ್ತಾಪವು ಯಾವುದೇ ಧರ್ಮದ ವಿರುದ್ಧವಲ್ಲ ಹಾಗೂ ಶಿರವಸ್ತ್ರ, ಪೇಟ ಅಥವಾ ಯಹೂದಿಗಳು ಧರಿಸುವ ಟೋಪಿ ಕಿಪ್ಪವನ್ನು ನಿಷೇಧಿಸುವುದಿಲ್ಲ ಎಂದು ಡೆನ್ಮಾರ್ಕ್‌ನ ಲಿಬರಲ್ ಪಾರ್ಟಿಯ ಜಾಕೊಬ್ ಎಲಮನ್ ಜೆನ್ಸನ್ ಹೇಳಿದ್ದಾರೆ.
ಲಿಬರಲ್ ಪಾರ್ಟಿ ಆಡಳಿತಾರೂಢ ಮೈತ್ರಿಕೂಟದ ಪ್ರಮುಖ ಘಟಕ ಪಕ್ಷವಾಗಿದೆ.
‘ಬುರ್ಖಾ ನಿಷೇಧ’ ಕಾನೂನಿನ ಪರವಾಗಿ ಮತ ಹಾಕುವುದಾಗಿ ಹೆಚ್ಚಿನ ಸಂಸದರು ಹೇಳಿದ್ದಾರೆ.
Next Story





